UN NETWORKS
ಉಳ್ಳಾಲ : ಬೈಕಿನಲ್ಲಿ ಬಂದ ಕಿರಾತಕರಿಬ್ಬರು ವೃದ್ಧೆ ಬಳಿಯಿದ್ದ ನಕಲಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಮಾಡೂರು ನಡಾರಿನ ಮಡ್ಯಾರ್ ಸಮೀಪ ಗುರುವಾರ ಸಂಭವಿಸಿದೆ.
ಮಾಡೂರು ನಿವಾಸಿ ಸೀತಾ(65) ಎಂಬವರು ನಡಾರು ಬಳಿಯಿರುವ ಸಹೋದರಿ ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಬೈಕಿನಲ್ಲಿ ಕಾಯುತ್ತಿದ್ದ ಇಬ್ಬರು ಯುವಕರು ಹಿಂಬದಿಯಿಂದ ಬಂದು ಸೀತ ಅವರ ಕತ್ತಿನಲ್ಲಿದ್ದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಆದರೆ ಸೀತ ಅವರ ಬಳಿ ಇದ್ದದ್ದು ನಕಲಿ ಚಿನ್ನವಾಗಿತ್ತು. ಕಳ್ಳರಿಬ್ಬರೂ ಚಿನ್ನ ಎಂದು ಕೊಂಡೊಯ್ದರೂ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.