Site icon Ullalavani

ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ವತಿಯಿಂದ ಗುರುವಂದನಾ ಕಾರ್ಯಕ್ರಮ

UN NETWORKS

ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು. ಇದರ ಆಶ್ರಯದಲ್ಲಿ ನಡೆದ ಗುರುಪೂರ್ಣಿಮೆಯ ಅಂಗವಾಗಿ ದೇರಳಕಟ್ಟೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಗುರುಸ್ವಾಮಿಯಾಗಿ ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಗುರುಸ್ವಾಮಿ ವಿಶ್ವನಾಥ್ ಕಾಯರ್‍ಪಳಿಕೆ ಅವರಿಗೆ ದೇರಳಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಂದನೆ ನೀಡಿ ಗೌರವಿಸಲಾಯಿತು.

ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ ಅವರು ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿ ದೇರಳಕಟ್ಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರುವಾರಿಗಳಲ್ಲಿ ಒಬ್ಬರಾದ ವಿಶ್ವನಾಥ್ ಕಾಯರ್‍ಪಳಿಕೆ ಅವರು ತನ್ನ ಮನೆಗಿಂತಲೂ ಹೆಚ್ಚಾಗಿ ದೇವಸ್ಥಾನದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡವರು. ಗುರುಸ್ವಾಮಿಯಾಗಿ ಅನೇಕ ಅಯ್ಯಪ್ಪ ಭಕ್ತರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಗುರುವಂದನಾ ನೆರವೇರಿಸಿರುವುದು ಶ್ಲಾಘನೀಯ ಎಂದರು. ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಭಗತ್‍ಸಿಂಗ್ ಪ್ರತಿಷ್ಠಾನದಂತಹ ಸಂಘಟನೆಯಿಂದ ಹಲವಾರು ಯುವ ಪ್ರತಿಭೆಗಳನ್ನು ಪೋಷಿಸಿದ ಇತಿಹಾಸವಿದ್ದು ಇದರೊಮದಿಗೆ ಸಮಾಜಿಕ ಕಾರ್ಯಗಳಿರಲಿ, ಪರಿಸರ ಸಂಬಂಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ ಸಾಧಕ ಹಿರಿಯರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾಗಿದ್ದು, ವಿಶ್ವನಾಥ ಕಾಯರ್‍ಪಳಿಕೆಯವರನ್ನು ಗುರುತಿಸಿ ಗುರವಂದನಾ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಗೆಜ್ಜೆಗಿರಿ ನಂದನ ಬಿತ್ತಿಲ್ ಉಳ್ಳಾಲ ವಲಯದ ಅದ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ ಭಗತ್ ಸಿಂಗ್ ಪ್ರತಿಷ್ಠಾನ ದೇಶಭಕ್ತ ಸಂಘಟನೆಯಾಗಿದ್ದು ಸೇವಾ ಮನೋಭಾವನೆಯೊಂದಿಗೆ ಕಾರ್ಯ ಮಾಡುತ್ತಿರುವ ಈ ಸಂಘಟನೆಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಯರ್‍ಪಳಿಕೆ ಅವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ಗುರುಸ್ವಾಮಿ ವಿಶ್ವನಾಥ್ ಕಾಯರ್‍ಪಳಿಕೆ ಮಾತನಾಡಿ ಶಬರಿಮಲೆ ಯಾತ್ರೆ ಜೀವನದಲ್ಲಿ ಪರಿವರ್ತನೆಯಾಗಲು ಒಂದು ಉತ್ತಮ ಅವಕಾಶ ಶಬರಿಮಲೆಗೆ ಹೋಗಿ ಪರಿವರ್ತನೆಯಾದವರು ಅನೇಕ ಮಂದಿ ಕಳೆದ 45 ವರ್ಷದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಈ ಗೌರವ ಸಂದಿದ್ದು ಭಗತ್‍ಸಿಂಗ್ ಪ್ರತಿಷ್ಠಾನ ಈ ಹಿಂದೆಯೂ ಅನೇಕ ಸಾಧಕರನ್ನು ಗುರು ಸಮಾನರಾದವರನ್ನು ಗೌರವಿಸಿರುವುದನ್ನು ನೋಡಿದ್ದು, ಇದೀಗ ನನಗೆ ಈ ಗೌರವ ನೀಡಿರುವುದು ಸಂತಸ ತಂದಿದ್ದು, ಈ ಸಂಸ್ಥೆ ಮುಂದೆಯೂ ತಮ್ಮ ಸಾಮಾಜಿಕ ಸೇವಾ ಕಾರ್ಯವನ್ನು ಮುಂದುವರೆಸಲಿ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಭಗತ್‍ಸಿಂಗ್ ಪ್ರತಿಷ್ಠಾನ ಜಿಲ್ಲೆಯ ಉತ್ತಮ ಸೇವಾ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಇಂತಹ ಸಂಘಟನೆಯ ಮೂಲಕ ಗುರು ಸಮಾನರಾದ ವಿಶ್ವನಾಥ್ ಕಾಯರ್‍ಪಳಿಕೆ ಅವರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದರು.ಬಿಜೆಪಿ ಮಂಗಳೂರು ಕ್ಷೇತ್ರ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಗುರುವಂದನಾ ನುಡಿ ಸಲ್ಲಿಸಿದರು. ಶ್ರೀ ಮೂಕಾಂಬಿಕಾ ಕನ್‍ಸ್ಟ್ರಕ್ಷನ್‍ನ ಚಂದ್ರಹಾಸ್ ಪಂಡಿತ್ ಹೌಸ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅನಿಲ್ ಬಗಂಬಿಲ, ಉದ್ಯಮಿ ಶರತ್ ರಾಜ್ ಶೆಟ್ಟಿ ದೇರಳಕಟ್ಟೆ,ಉಳ್ಳಾಲ ಪುರಸಭೆಯ ಮಾಜಿ ಸದಸ್ಯ ದಯಾನಂದ ತೊಕ್ಕೊಟ್ಟು, ಉದ್ಯಮಿ ಸಚಿನ್ ಮೋರೆ, ಅಯ್ಯಪ್ಪ ಸೇವಾ ಸಮಿತಿ ಕರ್ನಾಟಕದ ಕಾರ್ಯದರ್ಶಿ ಕೃಷ್ಣಯ್ಯ ತುಮಕೂರು, ಪುರುಷೋತ್ತಮ ಕಲ್ಲಾಪು, ಗಣೇಶ್ ಮರ್ಕೆದು, ಪ್ರತಿಷ್ಟಾನದ ಗೌರವ ಅಧ್ಯಕ್ಷ ರಾಕೇಶ್ ಬೈಪಾಸ್, ಪದಾದಿಕಾರಿಗಳಾದ ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು, ವಿಶ್ವನಾಥ ಶೆಟ್ಟಿ, ನಾರಾಯಣ.ಬಿ, ರಾಜೇಶ್ ಯು.ಬಿ, ಗಂಗಾದರ್ ಅಂಬ್ಲಮೊಗರು, ನವೀನ್ ಬೈಪಾಸ್, ಪ್ರವೀಣ್ ರೈ, ಮೋಹನ್ ಸೇವಂತಿಗುಡ್ಡೆ, ಶಿವಾಜಿ ತೊಕ್ಕೊಟ್ಟು, ಲಕ್ಷ್ಮೀನಾರಾಯಣ ಪಿಲಾರ್, ಪ್ರಸಾದ್ ಕೊಂಡಾಣ, ದೀಕ್ಷಿತ್ ಕಾಪಿಕಾಡ್ ಉಪಸ್ಥಿತರಿದ್ದರು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅದ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿ ಕಿರಣ್ ಕೊಲ್ಯ ವಂದಿಸಿದರು.

Exit mobile version