Site icon Ullalavani

ಎಸ್‌ವೈಎಸ್-ಎಸೆಸ್ಸೆಫ್ ಅಮ್ಮೆಂಬಳ ಶಾಖೆಯ ವತಿಯಿಂದ ಬೀಳ್ಕೊಡುಗೆ

UN NETWORKS

ಮುಡಿಪು : ಪವಿತ್ರ ಮಕ್ಕಾಕ್ಕೆ ಹಜ್‌ಗೆ ಹೊರಡಲಿರುವ ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಲೇಖಕ, ಪರಿಸರವಾದಿ ಬಿ.ಎಸ್. ಹಸನಬ್ಬ ಅಮ್ಮೆಂಬಳ ಅವರಿಗೆ ಎಸ್‌ವೈಎಸ್-ಎಸೆಸ್ಸೆಫ್ ಅಮ್ಮೆಂಬಳ ಶಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಎಸೆಸ್ಸೆಫ್ ಅಮ್ಮೆಂಬಳ ಬ್ರಾಂಚ್ ಜೊತೆ ಕಾರ್ಯದರ್ಶಿ ಅಬ್ಬಾಸ್ ಎಸ್. ಕೋಟೆ ಅವರ ಮನೆಯಲ್ಲಿ ರವಿವಾರ ನಡೆಯಿತು.

ಈ ಸಂದರ್ಭ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಅಮ್ಮೆಂಬಳ, ಕೇಂದ್ರ ಜುಮಾ ಮಸೀದಿಯ ಅಮ್ಮೆಂಬಳ ಅಧ್ಯಕ್ಷ ಹನೀಫ್ ಎಸ್.ಜಿ., ಅಮ್ಮೆಂಬಳ ಶಾಖೆಯ ಅಧ್ಯಕ್ಷ ಅನ್ವರ್ ಕೋಟೆ, ಎಸ್‌ವೈಎಸ್ ಅಮ್ಮೆಂಬಳ ಬ್ರಾಂಚ್ ಕೋಶಾಧಿಕಾರಿ ರಫೀಕ್ ಕೋಟೆ, ಕೇಂದ್ರ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಮುಸ್ತಫಾ ಕೋಟೆ, ಜಿ. ಎಸೆಸ್ಸೆಫ್ ಅಮ್ಮೆಂಬಳ ಶಾಖೆಯ ಮಾಜಿ ಅಧ್ಯಕ್ಷ ಸಮಿರ್, ಅಮ್ಮೆಂಬಳ ಹೆಲ್ಪ್ಲೈನ್ ಸಂಚಾಲಕ ಫರ್ವಿಝ್ ಅಮ್ಮೆಂಬಳ ಉಪಸ್ಥಿತರಿದ್ದರು.

Exit mobile version