Site icon Ullalavani

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಫ್ಯಾನ್ಸಿ ಮಾಲೀಕ ಸೆರೆ

UN NETWORKS

ಉಳ್ಳಾಲ :  ಫ್ಯಾನ್ಸಿ ಅಂಗಡಿಗೆ ಖರೀದಿಸಿದ ಬ್ಯಾಗ್ ಬದಲಾಯಿಸಲು ಬಂದಿದ್ದ ಅಪ್ರಾಪ್ತೆ  ಮೇಲೆ  ಅಶ್ಲೀಲ ವೀಡಿಯೋ ತೋರಿಸಿ,  ಅತ್ಯಾಚಾರಕ್ಕೆ ಯತ್ನಿಸಿದ  ಪ್ರಕರಣಕ್ಕೆ ಸಂಬಂಧಿಸಿ  ಮುಡಿಪು  ಫ್ಯಾನ್ಸೀ ಪ್ಯಾಲೇಸ್ ಅಂಗಡಿ ಮಾಲೀಕನ ವಿರುದ್ಧ  ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೊಣಾಜೆ  ಪೊಲೀಸರು ಬಂಧಿಸಿದ್ದಾರೆ.

ದೇರಳಕಟ್ಟೆ  ಬದ್ಯಾರು ಬಾಡಿಗೆ ಮನೆಯಲ್ಲಿರುವ , ವಿಟ್ಲ ನಿವಾಸಿ ಸಲೀಂ ಝಕರಿಯಾ (45) ಬಂಧಿತ. ವಿವಾಹಿತನಾಗಿರುವ ಈತ ಮೂವರು ಮಕ್ಕಳ ತಂದೆಯಾಗಿದ್ದಾನೆ.

ಘಟನೆ ವಿವರ : ಭಾನುವಾರ ತಂದೆಯ ಜತೆಗೆ ಮುಡಿಪು ಫ್ಯಾನ್ಸಿ ಅಂಗಡಿಗೆ ಬಂದಿದ್ದ ಅಪ್ರಾಪ್ತೆ   ಬ್ಯಾಗ್ ಖರೀದಿಸಿದ್ದಳು. ಬ್ಯಾಗ್   ಬಣ್ಣ ಬೇರೆ ಬೇಕಾದಲ್ಲಿ ನಾಳೆಯೂ ಬದಲಾಯಿಸಲುಬಹುದು ಅಂದಿದ್ದರು.   ಅದರಂತೆ ಸೋಮವಾರ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಫ್ಯಾನ್ಸಿ ಅಂಗಡಿಗೆ ತೆರಳಿ ಬ್ಯಾಗ್ ಬದಲಾಯಿಸುವಂತೆ ಕೇಳಿದ್ದಳು. ಈ ವೇಳೆ ಅಂಗಡಿ ಮಾಲೀಕ  ಸಲೀಂ ವಿದ್ಯಾರ್ಥಿನಿಯನ್ನು ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ  ಇತ್ತೀಚೆಗೆ   ನಡೆದ ಪುತ್ತೂರು ಸಾಮೂಹಿಕ ಅತ್ಯಾಚಾರದ ವೀಡಿಯೋ ತೋರಿಸಿದ್ದನು. ಬಳಿಕ ಇದು ತಮ್ಮ ಶಾಲೆಯ ವೀಡಿಯೋ? ಎಂದು ಪ್ರಶ್ನಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ.

ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ   ಶಿಕ್ಷಕರಲ್ಲಿ ನಡೆದ ವಿಚಾರ ತಿಳಿಸಿದ್ದು,  ಶಿಕ್ಷಕರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಆರೋಪಿ ಸಲೀಂನನ್ನು ಬಂಧಿಸಿ, ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ಜು.27ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿ ಆದೇಶ ನೀಡಲಾಗಿದೆ. 

Exit mobile version