UN NETWORKS
ಉಳ್ಳಾಲ : ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡೂರು ಕಾಯರ್ ಮಜಲ್ ಸಮೀಪ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಾಯರ್ ಮಜಲು ನಿವಾಸಿ ವಿಠಲ ಮತ್ತು ಚಂದ್ರಾವತಿ ದಂಪತಿ ಪುತ್ರಿ ದಿವ್ಯಾ(22) ಆತ್ಮಹತ್ಯೆಗೈದ ಯುವತಿ. ಶನಿವಾರ ತಡರಾತ್ರಿ ವೇಳೆ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ನಡೆಸಿದ್ದಾರೆ.ಶನಿವಾರ ಆಸ್ಪತ್ರೆಗೆ ತೆರಳಿದ್ದ ದಿವ್ಯಾ, ಅನಾರೋಗ್ಯದ ಕುರಿತು ವೈದ್ಯರ ಸಲಹೆ ಪಡೆದುಕೊಂಡು ವಾಪಸ್ಸಾಗಿದ್ದಳು. ಆ ಬಳಿಕ ಮಂಕಾಗಿದ್ದಳು. ಬಿಳಿ ರಕ್ತದ ಕಣಗಳು ಜೀವದಲ್ಲಿ ಹೆಚ್ಚಿವೆ ಅನ್ನುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರ ದೂರಿನಲ್ಲಿ ತಿಳಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.