Site icon Ullalavani

ಬೆಳ್ಮ: ಸೇವಾಶ್ರಮ ತಡೆಗೋಡೆ ಉದ್ಘಾಟನೆ

UN NETWORKS

ದೇರಳಕಟ್ಟೆ : ಸಮಾಜದಲ್ಲಿರುವ ಅಶಕ್ತ ತಾಯಂದಿರ ಆರೈಕೆ ಮಾಡುವ ಮೂಲಕ ಲಯನ್ಸ್ ಸೇವಾಶ್ರಮ ಉತ್ತಮ ಕಾರ್ಯ ನಡೆಸುತ್ತಿದ್ದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವ ಕಾರ್ಯವನ್ನು ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಮಂಗಳೂರಿನ ಸೇವಾಬಾವ ಚಾರಿಟೇಬಲ್ ಟ್ರಸ್ಟ್ ಆಶ್ರಯದ ದೇರಳಕಟ್ಟೆ ಬೆಳ್ಮದ ಸೇವಾಶ್ರಮದಲ್ಲಿ ಎಂಆರ್‍ಪಿಎಲ್ ವತಿಯಿಂದ ನಿರ್ಮಾಣಗೊಂಡಿರುವ ತಡೆಗೋಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಹಲವು ವರ್ಷಗಳಿಂದ ಸೇವಾಶ್ರಮ ಉತ್ತಮ ಕಾರ್ಯವನ್ನು ನಡೆಸುತ್ತಾ ಬಂದಿದೆ. ಸೇವಾಶ್ರಮ ನಿವಾಸಿಗಳ ಆಧಾರ್ ಕಾರ್ಡ್ ಇದ್ದಲ್ಲಿ ಅವರಿಗೆ ಆಹರ ಪದಾರ್ಥಗಳು ಸರಕಾರದಿಂದ ದೊರೆಯುತ್ತದೆ. ಆ ನಿಟ್ಟಿನಲ್ಲಿ ಎಲ್ಲರ ಆಧಾರ್ ಕಾರ್ಡ್ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸೇವಾಶ್ರಮದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಜಿ.ಆರ್. ಶೆಟ್ಟಿ ಮಾತನಾಡಿ ಕಳೆದ 6ವರ್ಷಗಳಿಂದ ಟ್ರಸ್ಟಿಗಳ ಮತ್ತು ದಾನಿಗಳ ಸಹಕಾರದಲ್ಲಿ ಸೇವಾಶ್ರಮವನ್ನು ನಡಡೆಸಿಕೊಂಡು ಬರುತ್ತಿದ್ದು, ಆಶ್ರಮದ ತಡೆಗೋಡೆ ನಿರ್ಮಾಣಕ್ಕೆ ಎಂಆರ್‍ಪಿಎಲ್ ಸಹಾಯಧನ ನೀಡಿದ್ದು, ಅದರೊಂದಿಗೆ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೊಳವೆ ಬಾವಿ ಕೊರೆಸಲಾಗಿದ್ದು ದಾನಿಗಳ ನಿರೀಕ್ಷೆಯಲ್ಲಿದೆ. ಇಲ್ಲಿ ಅನಾಥ ತಾಯಂದಿರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಶ್ಯಾಮಲಾ ಶೆಟ್ಟಿ, ಸೇವಾಶ್ರಮದ ಸಂಚಾಲಕಿ ಗೀತಾ ರ್ ಶೆಟ್ಟಿ, ಕಾರ್ಯದರ್ಶಿ ದೇವದಾಸ್, ಟ್ರಸ್ಟಿಗಳಾದ ಹರೀಶ್ ಆಳ್ವ, ಕೆ.ಪಿ.ರಾವ್ ಹಾಗೂ ಯಶವಂತ್ ಉಪಸ್ಥಿತರಿದ್ದರು.

Exit mobile version