Site icon Ullalavani

ದೇರಳಕಟ್ಟೆ: ಸಮುದಾಯದೊಂದಿಗೆ ಸಂವಾದ

UN NETWORKS

ದೇರಳಕಟ್ಟೆ : ದೇರಳಕಟ್ಟೆಯ ಯೇನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ದೇರಳಕಟ್ಟೆ ಶಾಂತಿಭಾಗ್ ಅನ್ಸಾರುಲ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಸ್ಥಳೀಯ ಸಾಮಾಜಿಕ ಮುಂದಾಳು ಮುನೀರ್ ಬಾವಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಯೇನೆಪೊಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರೆಯುವಂತಹ ಸೌಲಭ್ಯಗಳೊಂದಿಗೆ ಸಮಾಜಕ್ಕೆ ಇನ್ನೂ ಉತ್ತಮವಾದ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಹಾಗೂ ಆಸ್ಪತ್ರೆಯೊಂದಿಗೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳುವ ಕುರಿತು ನೆರೆದವರ ಜೊತೆಗೆ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಿಭಾಗ್ ದಾರುಸ್ಸಲಾಂ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮೊಹಮ್ಮದ್ ಪರಪ್ಪು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಮತ್ತು ಯೇನೆಪೊಯ ಆಸ್ಪತ್ರೆಯ ವತಿಯಿಂದ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅೀಕ್ಷಕ ಡಾ. ನಾಗರಾಜ ಶೇಠ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ಗುತ್ತಿಗಾರ್, ಆಸ್ಪತ್ರೆಯ ಅಧೀಕ್ಷಕ ಪ್ರವೀಣ್ ಕುಮಾರ್, ಆಸ್ಪತ್ರೆಯ ಸಹಾಯಕ ಆಡಳಿತಾಕಾರಿ ಮುಹಮ್ಮದ್ ಸಾಬಿತ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ, ಉಮ್ಮರ್ ಶಾಫಿ ಹಾಗೂ ಸಮಾಜ ಕಾರ್ಯ ವಿಭಾಗದ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.ಸ್ಥಳೀಯರಿಗೆ ರಿಯಾಯಿತಿಯಲ್ಲಿ ಚಿಕಿತ್ಸೆ ಪಡೆಯಲು ಯೆನ್ ಲೋಕಲ್ ಕಾರ್ಡ್ ಬಿಡುಗಡೆಗೊಳಿಸಲಾಯಿತು.

Exit mobile version