Site icon Ullalavani

ಮುಡಿಪು: ಪ್ರಥಮ ದರ್ಜೆ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

UN NETWORKS

ಮುಡಿಪು : ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2019-20ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು.

ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಭಾಗವಹಿಸಿದ್ದರು. ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮತ್ತು ರಾ.ಸೇ.ಯೋ ಕಾರ್ಯಕ್ರಮ ಅಧಿಕಾರಿ ದಯಾನಂದ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ರಾ.ಸೇ.ಯೋ ಉತ್ತಮ ವೇದಿಕೆ ಎಂದು ಪ್ರಶಾಂತ ಕಾಜವ ಅಭಿಪ್ರಾಯಪಟ್ಟರು.

ರಾ.ಸೇ.ಯೋ ಕಾರ್ಯಕ್ರಮ ಅಧಿಕಾರಿ ಶೋಭಾಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾವ್ಯಶ್ರೀ ಸ್ವಾಗತಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ರಾಜ್ ವಂದಿಸಿದರು.

Exit mobile version