Site icon Ullalavani

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

UN NETWORKS

ದೇರಳಕಟ್ಟೆ: ನಾವು ನೀಡಿದ ಸಸಿಗಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿ ಸಂರಕ್ಷಣೆ ಮಾಡಿದಾಗ ಮುಂದೆ ಆ ಗಿಡ ಮರವಾಗಿ ನಮ್ಮನ್ನು ಸಂರಕ್ಷಿಸುತ್ತದೆ, ಅಲ್ಲದೆ ಒಂದು ಸ್ವಚ್ಛ, ಆರೋಗ್ಯ ಪೂರ್ಣ ಪರಿಸರದ ನಿರ್ಮಾಣದಲ್ಲಿ ನಾವು ತೊಡಗಿದಂತಾಗಿ ಇತರರಿಗೆ ಮಾದರಿಯಾಗುತ್ತೇವೆ. ಆ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.

ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರತ್ನ ಎಜುಕೇಷನ್ ಟ್ರಸ್ಟ್ ವತಿಯಿಂದ ವಿವಿಧ ತಳಿಗಳ ಸಸಿಗಳನ್ನು ವಿತರಿಸಿ ಮಾತನಾಡಿದರು. ದೇರಳಕಟ್ಟೆಯ ಯೂನಿಯನ್ ಬ್ಯಾಂಕ್‍ನ ಮೆನೇಜರ್ ವಿಜಯ ಬೋರ್ಕರ್, ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಶಿಕ್ಷಕರಾದ ರವಿಕುಮಾರ್ ಕೋಡಿ, ವೀಣಾ ರಾಮದಾಸ್, ಹೇಮಮಾಲಿನಿ, ಶ್ವೇತಾ, ರಾಕೇಶ್ ಕಂಬಳಪದವು, ಪವಿತ್ರ ಉಪಸ್ಥಿತರಿದ್ದರು.

Exit mobile version