UN NETWORKS
ಹಿರಾ : ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ, ಇಲ್ಲಿನ ವಿದ್ಯಾರ್ಥಿನಿಯರಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರಿಗಾಗಿ ಫ್ರೆಶರ್ಸ್ ಡೇ ಕಾರ್ಯಕ್ರಮ ಮತ್ತು 2019-20 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರತಿಜ್ಞಾಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು.
ಕಾಲೇಜಿನ ನಾಯಕಿಯಾಗಿ ವಿದ್ಯಾರ್ಥಿನಿ ಹಲೀಮ ರುಝ್ಮಿ , ಉಪನಾಯಕಿಯಾಗಿ ಶಮ್ರೀನ್ ಆಯ್ಕೆಗೊಂಡರು.
ಪ್ರಾಂಶುಪಾಲೆ ಭಾರತಿ ಎಂ.ಆರ್. ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಫ್ರೆಶರ್ಸ್ ಡೇ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೊಸ ವಿದ್ಯಾರ್ಥಿನಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಮಾಡಿಕೊಡಲಾಯಿತು. ವಿದ್ಯಾರ್ಥಿನಿ ರಹೀಮ ಮತ್ತು ಅಶ್ವಿನಾ ಶಿರಿನ್ ರವರು ಕಿರಾತ್ ಪಠಿಸಿದರು. ಹವರನ್ಯ ಕಾರ್ಯಕ್ರವi ನಿರೂಪಿಸಿದರು.