Site icon Ullalavani

ಸುಮಾರು 12 ಕೋಟಿಗೂ ಅಧಿಕ ಸದಸ್ಯರ ಮೂಲಕ ಬಿ.ಜೆ.ಪಿ. ಜಗತ್ತಿನ ಅತೀ ದೊಡ್ಡ ರಾಜಕೀಯ ಶಕ್ತಿಯಾಗಿದೆ:ಗೋಪಾಲಕೃಷ್ಣ ಹೇರಳೆ

UN NETWORKS

ಉಳ್ಳಾಲ : ಸುಮಾರು 12 ಕೋಟಿಗೂ ಅಧಿಕ ಸದಸ್ಯರ ಮೂಲಕ ಬಿ.ಜೆ.ಪಿ. ಜಗತ್ತಿನ ಅತೀ ದೊಡ್ಡ ರಾಜಕೀಯ ಶಕ್ತಿಯಾಗಿದೆ. ಮುಂದೆ 20 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿಯಿಟ್ಟು ಸದಸ್ಯತನ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ವಾರಾಣಾಸಿಯಲ್ಲಿ ಚಾಲನೆ ನೀಡಿದ್ದಾರೆ ಎಂದು ಬಿ.ಜೆ.ಪಿ.ಸದಸ್ಯತನ ಅಭಿಯಾನದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ.

ಅವರು ಮಂಗಳೂರು ಬಿ.ಜೆ.ಪಿ.ಯ ವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಾಗಾರದಲ್ಲಿ ಹೇಳಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ 45 ಶಕ್ತಿ ಕೇಂದ್ರಗಳನ್ನಾಗಿ ವಿಂಗಡಿಸಿ ಸಂಚಾಲಕ, ಮತ್ತು ಪ್ರಮುಖರನ್ನು ನಿಯೋಜಿಸಿ ಪ್ರತಿ ಬೂತಿನಲ್ಲೂ ಮಿಸ್ ಕಾಲ್ ಮೂಲಕ ಸದಸ್ಯರನ್ನು ಸೇರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕ್ಷೇತ್ರಧ್ಯಕ್ಷ ಸಂತೋಷ್ ಬೋಳಿಯಾರ್ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್, ಹಿರಿಯರಾದ ಸೀತರಾಮ್ ಬಂಗೇರ, ಸಂಜೀವ ಶೆಟ್ಟಿ ಅಂಬ್ಲಮೊಗರು, ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು. ಮಹಿಳಾ ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು ವಂದೆ ಮಾತರಮ್ ಹಾಡಿದರು.

Exit mobile version