UN NETWORKS
ಉಳ್ಳಾಲ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬಿರುಸಿನ ಗಾಳಿಗೆ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಅಬ್ಬರಕ್ಕೆ 10ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಹಲವು ಮನೆಗಳು ಹಾನಿಗೊಳಗಾಗಿದೆ. ಐದು ಮರಗಳು ಧರಾಶಾಹಿಯಾಗಿದೆ. ತಾತ್ಕಾಲಿಕ ಕಡಲ್ಕೊರೆತಕ್ಕೆ ತಟದ ಸುಮಾರು 200ಮೀ. ಉದ್ದಕ್ಕೆ ಹಾಕಲಾದ ಭಾರೀ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿದೆ.
ಎರಡು ವಾರದ ಹಿಂದೆ ಉಚ್ಚಿಲ ಕೋಟೆ, ಸೀಗ್ರೌಂಡ್ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು ಅದರಿಂದಾಗಿ ಬಹಳಷ್ಟು ಮನೆಗಳು ಹಾನಿಗೀಡಾಗಿದ್ದವು, ಕೆಲವು ಮನೆಗಳು ಧರಾಶಾಹಿಯಾಗಿತ್ತು.
ಶನಿವಾರ ಹಾಗೂ ಭಾನುವಾರದ ಮಳೆ ಹಾಗೂ ಬಿರುಸಿನ ಗಾಳಿಗೆ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಉಚ್ಚಿಲದ ಕಡಲ ತಟ ಭಾಗದ ನಿವಾಸಿಗಳಾದ ರೂಪೇಶ್, ಸಂತೋಷ್, ತಾರಾನಾಥ್, ಸಂಜೀವ, ಕಿಶೋರ್, ಚಿದಾನಂದ, ಪ್ರದೀಪ್, ಚಂದಪ್ಪಣ್ಣವರ ಅಂಗಡಿ ಕಡಲ್ಕೊರೆತಕ್ಕೆ ಹಾನಿಯಾಗಿದೆ. ಹಾಗಿದ್ದರೂ ಈ ಭಾಗದಲ್ಲಿ ತಾತ್ಕಾಲಿಕ ಬ್ರೇಟ್ ವಾಟರ್ ದೊಡ್ಡ ಸಮಸ್ಯೆ ಎಂಬುದು ಕೆಲವರ ಅಭಿಪ್ರಾಯ.