UN NETWORKS
ಮಂಗಳೂರು :ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಮಂಗಳೂರು ವತಿಯಿಂದ ನಗರದ ಅಭಿಮಾನ್ ರೆಸಿಡೆನ್ಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯುಷ್ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಾಗಾರ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆಯೊಂದಿಗೆ ವಿವಿಧ ಕಾರ್ಯಕ್ರಮ ನಡೆಯಿತು.
ನಿರಂತರ ವೈದ್ಯಕೀಯ ಕಾರ್ಯಕ್ರಮದಡಿಯಲ್ಲಿ ಪ್ರಸಿದ್ಧ ಯೋಗ ತಜ್ನ ಡಾ.ಕೆ.ಗಣೇಶ ಭಟ್ ರವರು ” ಯೋಗ ಥೆರಪಿ ಇನ್ ಫ಼್ರೋಜನ್ ಶೋಲ್ಡರ್” ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.ಅಂತಾರಾಷ್ಟ್ರೀಯ ವೈದ್ಯರ ದಿನಾಚಾರಣೆಯ ಅಂಗವಾಗಿ ಆಯುಷ್ ವೈದ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕು.ಅಶ್ವೀಜಾ ಉಡುಪ ಇವರಿಂದ ಅದ್ಭುತ ಯೋಗ ಪ್ರದರ್ಶನ ನಡೆದು ನಂತರ ಡಾ.ಪ್ರತಿಭಾ ರೈ, ಡಾ.ಸುಧೀರ್ ಪ್ರಭು, ಡಾ.ವಿಜಯಲಕ್ಷ್ಮಿ ಪ್ರಸನ್ನಿ ಇವರು ತಮ್ಮ ಸುಶ್ರಾವ್ಯ ಕಂಠದಿಂದ ಸಭಿಕರ ಮನಸೂರೆಗೊಂಡರು.
ಡಾ.ಸುದೀಪ್ ದಂಪತಿಗಳ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಡಾ.ಶಶಿಧರ ಕಜೆಯವರು ಕಾರ್ಯಕ್ರಮ ನಿರ್ವಹಿಸಿ, ಮಂಗಳೂರು ಏ.ಎಫ್.ಐ.ಅಧ್ಯಕ್ಷ ಡಾ.ಕೃಷ್ಣ ಎಮ್ ಗೋಖಲೆಯವರು ಸ್ವಾಗಸಿದರೆ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ರವರು ವಂದನಾರ್ಪಣೆ ಮಾಡಿದರು.ಜಿಲ್ಲಾ ಅಧ್ಯಕ್ಷ ಡಾ.ನಾರಾಯಣ ಅಸ್ರ ಹಾಗೂ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀದೇವಿ ಭಟ್ ಉಪಸ್ಥಿತರಿದ್ದರು.