UN NETWORKS
ಉಳ್ಳಾಲ : ಅವರು 71ರ ಹರೆಯದ ಹಿರಿಯ ವ್ಯಕ್ತಿ. ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿ ವೈಯಕ್ತಿಕ ಕಾರಣಕ್ಕೆ ವೃತ್ತಿಯನ್ನು ತೊರೆದು ಮನೆಗೆ ವಾಪಸ್ಸಾಗಿದವರು. ಅನಾಥರಾಗಿ ಬಾಳುತ್ತಿರುವವವರು ಮರದ ಮೇಲಿಂದ ಕೆಳಗೆ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡು , ಸರಿಯಾಗಿ ನಡೆಯಲು ಸಾಧ್ಯವಾಗದೆ ಕಳೆದ ಮೂರು ವರ್ಷದಿಂದ ನೋವು ನುಂಗುತ್ತಾ ಜೀವನ ಎದುರಿಸುತ್ತಿದ್ದರು. ಆದರೆ ಇದೀಗ ಕಾಲು ನೋವು ವಿಪರೀತ ಆಗಿರುವುದರಿಂದ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಮೊರೆ ಹೋಗಿದ್ದಾರೆ. ಫೌಂಡೇಷನ್ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಅವರು ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದರೂ, ಇದೀಗ ಕಾಲಿನ ಶಸ್ತ್ರಚಿಕಿತ್ಸೆಗೆ ಸಾವಿರಾರು ರೂ. ತಗಲುವ ಹಿನ್ನೆಲೆಯಲ್ಲಿ ದಾನಿಗಳ ಮೊರೆ ಹೋಗಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆಯ ಬೋಜ (71) ದಯನೀಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕಾಲು ನೋವು ವಿಪರೀತ ಆಗಿರುವುದರಿಂದ ನೆಡಯಲು ಹಾಗೂ ನೋವು ತಡೆಯಲು ಅಸಾಧ್ಯವಾಗಿ ರಾಝಿಕ್ ಉಳ್ಳಾಲ್ ಅವರನ್ನು ಸಂಪರ್ಕಿಸಿದ್ದಾರೆ. ಸದಾ ಮಾನವ ನೋವುಗಳಿಗೆ ಸ್ಪಂಧಿಸುತ್ತಾ ಬಂದಿರುವ ರಾಝಿಕ್ ಅವರು ಖುದ್ದು ತಾವೇ ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಡಗಾಲಿನ ಪಾದ ಮುರಿತಕ್ಕೊಳಗಾಗಿರುವುದರಿಂದ ನೋವು ಅತಿಯಾಗಿದೆ. ಅದಕ್ಕಾಗಿ ಶಸ್ತ್ರಚಿಕಿತ್ಸೆಯೊಂದೇ ದಾರಿ ಅಂದಿರುವ ವೈದ್ಯರು ರೂ.30,000 ದಷ್ಟು ವೆಚ್ಛ ಆಗುವ ಸಾಧ್ಯತೆಯನ್ನು ತಿಳಿಸಿದ್ದಾರೆ. ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ಕೈಲಾಗುವಷ್ಟು ಸಹಕರಿಸುವ ಭರವಸೆ ನೀಡಿದೆ. ಆದರೂ ದಾನಿಗಳು ಮುಂದೆ ಬಂದು ಸಹಕರಿಸಿದಲ್ಲಿ ಶೀಘ್ರವೇ ಶಸ್ತ್ರಚಿಕಿತ್ಸೆ ನಡೆದು ಹಿರಿ ಜೀವದ ಭವಿಷ್ಯ ಬದಲಾಯಿಸಬಹುದಾಗಿದೆ.
ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿದ್ದ ಭೋಜ ಅವರು ಸಿಕಂದರಾಬಾದ್ ಗಲಾಟೆ ಸಂದರ್ಭ ವೈಯಕ್ತಿಕ ಕಾರಣಗಳಿಂದ ಸೇನೆ ತೊರೆದು ಮನೆಗೆ ವಾಪಸ್ಸಾಗಿದ್ದರು. ಆನಂತರ ಸಣ್ಣ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಮದುವೆಯಾಗದೆ ಏಕಾಂಗಿಯೇ ಉಳಿದ ಇವರು ಸಹೋದರರ ಕುಟುಂಬದ ಜತೆಗೆ ನೆಲೆಸಿದ್ದರು.
ಐದು ವರ್ಷಗಳ ಹಿಂದೆ ಮಾಸ್ತಿಕಟ್ಟೆ ಸಮೀಪ ಮರಕಡಿಯುವ ಸಂದರ್ಭ ಮೇಲಿನಿಂದ ಕೆಳಕ್ಕೆ ಉರುಳಿ ಕಾಲಿಎ ಗಾಯಗೊಂಡಿದ್ದರು. ಈ ವೇಳೆ ಆಸ್ಪತ್ರೆಗೆ ತೆರಳಿದರೂ ವೈದ್ಯರು ಶಸ್ತ್ರಚಿಕಿತ್ಸೆ ಪ್ರಸ್ತಾಪ ಮುಂದಿಟ್ಟಾಗ ಹೆದರಿ ಆಸ್ಪತ್ರೆಯಿಂದಲೂ ವಾಪಸ್ಸಾಗಿದ್ದರು. ಆದರೆ ಇತ್ತೀಚೆಗೆ ಕಾಲು ನೋವು ವಿಪರೀತವಾಗಿ ನಡೆಯಲಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಸಹೋದರರ ಮನೆಯಲ್ಲಿದ್ದರೂ, ಅವರ ಆರ್ಥಿಕತೆ ಉತ್ತಮವಾಗಿರದೆ ಚಿಕಿತ್ಸೆಗೆ ಹಣವನ್ನು ಹೊಂದಿಸಲಾಗದ ಸ್ಥಿತಿಯಲ್ಲಿ ಅವರಿದ್ದಾರೆ. ಇದೀಗ ಆಸ್ಪತ್ರೆಯಲ್ಲಿರುವ ಭೋಜ ಅವರ ಕಾಲು ಸರಿಯಾಗಲು ದಾನಿಗಳು ಮುಂದೆ ಬಂದು ಕಣಚೂರು ಆಸ್ಪತ್ರೆಯಲ್ಲಿ ಸಹಕರಿಸಬಹುದು ಎಂದು ಹೆಲ್ಪ್ ಇಂಡಿಯಾ ಫೌಂಡೇಷನ್ ತಿಳಿಸಿದೆ.