ವರದಿ : ರಜಿನಿ ಜಗದೀಶ್ ಪಡೀಲ್ ದುಬೈ
ದುಬೈ: ದುಬೈನ ವರಮಹಾಲಕ್ಷ್ಮಿ ಪೂಜಾ ಸೇವಾ ಸಮಿತಿಯ ಅಶ್ರಯದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಸುಮಂಗಲೆಯರು ಸೇರಿಕೊಂಡು ಆಚರಿಸುವ ಒಂಭತ್ತನೇಯ ವರ್ಷದ ವರಮಹಾಲಕ್ಷ್ಮೀ ಪೂಜೆಯನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ಸ್ವರ್ಣಾ ಸತೀಶ್ ಪೂಜಾರಿ ಹೇಳಿದರು.
ಈ ಬಾರಿಯ ೯ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಇಂಡಿಯನ್ ಅಕಾಡೆಮಿ ಶಾಲೆಯಲ್ಲಿ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸಂದರ್ಭ ರಾಜೇಶ್ ಕುತ್ತಾರ್, ಬಾಲಕೃಷ್ಣ ಸಾಲ್ಯಾನ್, ಪ್ರಕಾಶ್ ಪಕಳ, ಸುಧಾಕರ್, ಸತೀಶ್ ಉಳ್ಳಾಲ್, ಅರುಣಾ ಜಗದೀಶ್ ಶೆಟ್ಟಿ, ಜಯಶ್ರೀ ಸುಧಾಕರ್, ಜಗನ್ನಾಥ ಬೆಳ್ಳಾರಿ,ರಮಾನಂದ ಬೆಳಪು ಮೊದಲಾದವರು ಉಪಸ್ಥಿತರಿದ್ದರು.
ರೇಶ್ಮಾ ಶೆಟ್ಟಿ ಗಣಪತಿ ಸ್ತುತಿ ಮಾಡಿದರು. ಸಭೆಯಲ್ಲಿ ನೂತನ ಸದಸ್ಯರ ಪರಿಚಯ ಕಾರ್ಯಕ್ರಮ ನಡೆಯಿತು.