UN NETWORKS
ತೊಕ್ಕೊಟ್ಟು : ತಾಯಿಯ ಸ್ವಂತ ಅಣ್ಣನ ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದ್ದು ಕೊಲೆಗೆ ಕೌಟುಂಬಿಕ ಕಲಹ ಎಂದು ಸಂಶಯಿಸಲಾಗಿದೆ.
ದೈವಸ್ಥಾನದ ಮುಂಭಾಗದ ಮನೆಯ ಒಡತಿ ಲಲಿತಾ ಅವರ ಅಣ್ಣನ ಮಗ (45)ನಾರಾಯಣ ಕೊಲೆಯಾಗಿದ್ದು ಲಲಿತಾ ಅವರ ಮಗ ರಾಜೇಶ್ (35) ಕೊಲೆ ಆರೋಪಿಯಾಗಿದ್ದು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಲಲಿತಾ ಅವರ ಅಣ್ಣನ ಮಗ ನಾರಾಯಣ ಲಲಿತಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದು ಲಲಿತಾ ಅವರ ಹಿರಿಯ ಮಗ ರಾಜೇಶ್(35) ಕೊಲೆ ಮಾಡಿರುವ ಸಂಶಯದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಲಲಿತಾ ಅವರ ಎರಡನೆಯ ಮಗ ರಮೇಶ್ ಮೂಡುಬಿದಿರೆಯಲ್ಲಿ ವಾಸವಾಗಿದ್ದಾನೆ.
ಆರೋಪಿ ರಾಜೇಶ್ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ. ಈ ಬಾರಿಯೂ ಊರಿಗೆ ಬಂದವರು ರಜಾ ಮೇಲೆ ಊರಿನಲ್ಲಿದ್ದ.ನಾರಾಯಣ ಕೂಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಮಾತಿನ ಚಕಮಕಿ ನಡೆದು ಕೊಕೆ ನಡೆದಿರಬೇಕು ಎಂದು ಸಂಶಯಿಸಲಾಗಿದ್ದು ನಾರಾಯಣ ಅವರನ್ನು ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಲಾಗಿದೆ. ಬಳಿಕ ಕೊಲೆಗೆ ಬಳಸಿದ ಕತ್ತಿಯನ್ನು ತೊಳೆದು ಕೊಲೆಯಾದ ನಾರಾಯಣ ಕೈಯಲ್ಲಿ ಇಟ್ಟಿದ್ದ. ಆರೋಪಿ ಕುಡಿದಿರುವ ಶಂಕೆ ಇದೆ.ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಫೋರೊನ್ಸಿಕ್ ತಜ್ಞ ಡಾ. ಮಹಬಲೇಶ್ ಶೆಟ್ಟಿ ಹಾಗೂ ತಂಡ,ಎಸಿಪಿ ರಾಮರಾವ್, ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಹಾಗೂ ಎಸ್ ಐ ಗುರುವಪ್ಪ ಕಾಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.