UN NETWORKS
ಉಳ್ಳಾಲ : ಉಚ್ಚಿಲ ಸೋಮೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಚುನಾವಣೆಯ ಹೊಸ ನಾಯಕರುಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೃಷ್ಣಗಟ್ಟಿ ಪ್ರತಿಜ್ಞಾ ವಿಧಿ ನೆರವೇರಿಸಿಮಂತ್ರಿಗಳಿಗೆ ಅವರವರ ಕರ್ತವ್ಯವನ್ನು ಶ್ರದ್ಧೆಯಿಂದ ಹಾಗೂ ಉತ್ತಮ ಬಾಂಧ್ಯವ್ಯದೊಂದಿಗೆ ನಿರ್ವಹಿಸಲು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಉಮೇಶ್ ಉಚ್ಚಿಲ್, ಇಸ್ಮಾಯಿಲ್ ಎನ್. ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯ ಲಕ್ಷ್ಮಣ ಕೆ.ವಿ. , ಸಹ ಶಿಕ್ಷಕರು ಉಪಸ್ಥಿತರಿದ್ದರು.