Site icon Ullalavani

ಕೋಟೆಕಾರು: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಓರಿಯೆಂಟೇಷನ್ ಕಾರ್ಯಕ್ರಮ

UN NETWORKS

ಕೋಟೆಕಾರು: ಪರಿಜ್ಞಾನ ವಿದ್ಯಾಲಯ, ಸೋಮೇಶ್ವರ ಕೋಟೆಕಾರ್ ನಲ್ಲಿ  ವಿದ್ಯಾರ್ಥಿಗಳ ಪೋಷಕರಿಗೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಒಂದು ದಿನದ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು.

ಸಾರಸ್ವತ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಮಹೇಶ್‍ಎಲ್.ಬೊಂಡಾಲ್, ಮುಖ್ಯಶಿಕ್ಷಕಿ ರಂಜಿತ ಎಮ್. ಜೋಷಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಸ್ಕೌಟ್ ಮತ್ತು ಗೈಡ್ಸ್ ನ ಲೀಡರ್ ಟ್ರೈನರ್ ಜಯವಂತಿ ಸೋನ್ಸ್ ಇವರು ಸ್ಕೌಟ್ ಮತ್ತು ಗೈಡ್ಸ್ ಮತ್ತು ಬುಲ್ ಬುಲ್‍ಗಳ ಬಗ್ಗೆ ಸವಿವರಾದ ಮಾಹಿತಿ ನೀಡಿದರು.ರಾಮಕೃಷ್ಣ ಮಿಶನ್ ಸ್ವಚ್ಚತಾ ಅಭಿಯಾನ್, ಮಂಗಳೂರು ಇದರ ಸದಸ್ಯ ಉಮನಾಥ್ ಕೋಟೆಕಾರ್ ಮತ್ತು ಸಚಿನ್‍ರವರು ಹಸಿಕಸ ನಿರ್ವಹಣೆಗೆ ಮೂರು ಮಡಕೆಯಗೊಬ್ಬರದ ವಿಧಾನದ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಹಿಪೊ ಕ್ಯಾಂಪಸ್‍ನ ವಲಯ ವ್ಯವಸ್ಥಾಪಕಿ ಶೋಭಾ ಪೈ ಪೋಷಕರಿಗೆ ಹಿಪೊ ಕ್ಯಾಂಪಸ್‍ನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಚೇತನ ಗುಲ್ವಾಡಿ ಸ್ವಾಗತಿಸಿದರು. ರೀಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ದೇವಿಶ್ರೀ ವಂದಿಸಿದರು.

Exit mobile version