UN NETWORKS
ಉಳ್ಳಾಲ: ತೊಕ್ಕೊಟಿನ ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಗಿಡ ನೆಡಿ, ಪರಿಸರ ಉಳಿಸಿ ಎಂಬ ಆಶಯದೊಂದಿಗೆ ಸಮಾಜದ ಗಣ್ಯರ ಮನೆಯಲ್ಲಿ ಗಿಡ ನೆಡುವುದರ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ ಉಚ್ಚಿಲ್, ಸುರೇಶ್ ಭಟ್ನಗರ್, ಸಂಜೀವ ಶೆಟ್ಟಿ ಅಂಬ್ಲಮೊಗರು ಇವರ ಮನೆಯಲ್ಲಿ ಸಸಿ ನೆಡಲಾಯಿತು. ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮರಗಳ ವಿಶೇಷತೆ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು.
ಸೋಮೇಶ್ವರ ಪಂ.ಅಧ್ಯಕ್ಷ ರಾಜೇಶ್ ಉಚ್ವಿಲ್, ರಘು ಉಚ್ಚಿಲ್, ಗೌರವಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮೋಹನ್ ಸಾಲ್ಯಾನ್, ನವೀನ್ ಎ.ಕೆ.,ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಪ್ರ.ಸಂ. ಕಾರ್ಯದರ್ಶಿ ಕಿರಣ್ ಕೊಲ್ಯ, ಪದಾಧಿಕಾರಿಗಳಾದ ಚೇತನ್ ಕುಮಾರ್, ರಾಜೇಂದ್ರ, ನಾರಾಯಣ ಬಿ., ಕೃಷ್ಣ ಪೊನ್ನೊತ್ತೊಡು, ಪ್ರವೀಣ್ ಬಸ್ತಿ,,ಗಂಗಾಧರ, ದೀಕ್ಷಿತ್, ಪ್ರಕಾಶ್ ಕೊಲ್ಯ ಉಪಸ್ಥಿತರಿದ್ದರು.