Site icon Ullalavani

ಕುಂಪಲ : 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

UN NETWORKS

ಕುಂಪಲ : ಕುಂಪಲ ಬಾಲಕೃಷ್ಣ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ಉತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂದಿರದಲ್ಲಿ ನಡೆಯಿತು. ಪುಟಾಣಿಗಳಾದ ಚಾಹಲ್, ಯಾಶಿಕ್ ನಾಯಕ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಭಜನಾ ತಂಡದ ಸಂಚಾಲಕ ಕೃಷ್ಣ ಪೊನ್ನತ್ತೋಡು ಮಾತನಾಡಿ ಕುಂಪಲ ಬಾಲಕೃಷ್ಣ ಮಂದಿರ ಭಜನಾ ಕ್ಷೇತ್ರ ಮತ್ತು ಸಾಂಸ್ಕೃತಿಕ, ಸಾಮಾಜಿಕ ರಂಗದಲ್ಲೂ ವಿಶೇಷ ಸೇವೆ ಮಾಡುತ್ತಿದ್ದು ಈ ಬಾರಿ 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯು ಆ. 23 ತಾರೀಕಿಗೆ ನಡೆಯಲಿದೆ ಎಂದು ಹೇಳಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವ ಅಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ, ಪ್ರಧಾನ ಸಂಚಾಲಕ ಗಣೇಶ್ ಶಿಲ್ಪಿ, ಮಂದಿರದ ಪ್ರಮುಖರಾದ ಚಂದ್ರ ಶೇಖರ್ ಬಿ.ಜೆ, ಮಾದವ ಬಂಗೇರ, ವೆಂಕಟೇಶ್ ಕುಂಪಲ, ಚಂದ್ರಹಾಸ ಮೂರುಕಟ್ಟೆ, ಅಶೋಕ್ ಕುಂಪಲ, ಚೇತನ್ ಪೂಜಾರಿ, ಸೋಮಶೇಖರ್, ವಿಕಾಸ್ ರಾವ್, ರಾಜೇಶ್ ಬಲ್ಯ, ಉಗ್ಗಪ್ಪ ಟೈಲರ್, ಹರೀಶ್ ಅಂಬ್ಲಮೊಗರು, ಗಣೇಶ್ ಹನುಮಾನ್ ನಗರ, ಆನಂದ್ ಮಿತ್ರನಗರ, ಗೋಪಾಲ ಕೃಷ್ಣ , ಮಹಿಳಾ ಪ್ರಮುಖರಾದ ಸುಶೀಲಾ ದೇವಪ್ಪ, ರೇಖಾ ವೆಂಕಟೇಶ್, ರತ್ನ ಶೆಟ್ಟಿ, ಕೃತಿ ಶೆಟ್ಟಿ, ಮಮತಾ ಸತೀಶ್, ಸಾಲಿನಿ ಗಣೇಶ್, ಕಸ್ತೂರಿ ಸಂಜೀವ, ರೇಖಾ ಚಂದ್ರಹಾಸ, ಮೇಘಾಶ್ರೀ, ಕುಮುದಾ ಅಡಪ, ರೇಖಾ ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು.

Exit mobile version