Site icon Ullalavani

ದೇರಳಕಟ್ಟೆ : ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ವೈದ್ಯರ ದಿನಾಚರಣೆ

UN NETWORKS

ದೇರಳಕಟ್ಟೆ : ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರ. ಇಲ್ಲಿ ರೋಗಿಯ ಆರೈಕೆ ಅತ್ಯಂತ ಮಹತ್ವದ ಕಾರ್ಯ ಯುವ ವೈದ್ಯರು ತಮ್ಮ ವೈದ್ಯ ವೃತ್ತಿಯನ್ನು ಮಾದರಿಯಾಗಿ ತೆಗೆದುಕೊಂಡು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಹಾಗೂ ಜಸ್ಟೀಸ್ ಕೆ. ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇವರ ವತಿಯಿಂದ ಕೆ. ಎಸ್ . ಹೆಗ್ಡೆ ಆಸ್ಪತ್ರೆಯ `ಚಿಂತನ’ ಸಭಾಂಗಣದಲ್ಲಿ ಸೋಮವಾರ ನಡೆದ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬ ವೈದ್ಯರಿಗೆ ತಮ್ಮದೇ ಆದ ಬದ್ಧತೆ ಇದೆ. ಎಲ್ಲಾ ಸಮಯದಲ್ಲೂ ಹಣವೇ ಮುಖ್ಯವಾಗಿರುವುದಿಲ್ಲ. ಹಣದೊಂದಿಗೆ ಸೇವಾ ಮನೋಭಾವನೆ ಇದ್ದರೆ ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಅಂತಹ ಸೇವೆ ಮಾಡಿರುವ ಮೂವರು ವೈದ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಿದ್ದು ಇಂತವರನ್ನು ಅನುಸರಿಸುವ ಕಾರ್ಯ ಯುವ ವೈದ್ಯರಿಂದ ಆಗಬೇಕು ಎಂದ ಅವರು ಇಂದು ಜನರಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆ ಇದಕ್ಕೆ ಒಂದು ಉದಾಹರಣೆ ಸಣ್ಣ ಹುಡುಗಿಯ ಮೇಲೆ ಅಕ್ರಮಣ ನಡೆಯುತ್ತಿದಾಗ ಜನರು ಅದರ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬಗ್ಗೆ ಚಿಂತಿಸುತ್ತಾರೆ. ಆದರೆ ಆಕೆಯನ್ನು ರಕ್ಷಿಸುವ ಮನಸ್ಥಿತಿ ಯಾರಲ್ಲೂ ಇಲ್ಲದಾಗಿದೆ ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ದಾದಿಯೊಬ್ಬರ ದಿಟ್ಟತನ ಶ್ಲಾಘನೀಯವಾಗಿದೆ ಎಂದರು.

ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಅದಕ್ಕೆ ಮುಖ್ಯ ಕಾರಣ ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬಂದಿಗಳು. ನಾವು ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡುತ್ತೇವೆ ಆದರೆ ಸೇವೆಯನ್ನು ನೀಡುವ ಕಾರ್ಯ ಇಲ್ಲಿನ ವೈದ್ಯರಿಂದ ಆಗುತ್ತೊಇರುವುದು ಶ್ಲಾಘನೀಯ ಎಂದರು. ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಹಣ, ಗೌರವ, ಹಸೆರು ಬರುತ್ತದೆ ಆದರೆ ಮುಖ್ಯವಾಗಿ ಬೇಕಾಗಿರುವುದು ರೋಗಿಗಳು ನಮ್ಮ ಗುರುತಿಸುವುದು ಅಂತಹ ಕೆಲಸವನ್ನು ಈ ಮೂವರು ವೈದ್ಯರು ಮಾಡಿದ್ದಾರೆ ಆಂತವರನ್ನು ಗುರುತಿಸುವ ಕಾರ್ಯ ಈಗ ನಿಟ್ಟೆ ವಿವಿಯಿಂದ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಾಗಿರುವ ಡಾ| ರವೀಂದ್ರನಾಥ ಶೆಟ್ಟಿ ಹಾಗೂ ಕೇರಳದ ಪೈಯ್ಯನ್ನೂರಿನ ಜನ ಸಾಮಾನ್ಯರ ನಡುವಿನಲ್ಲಿ ಸೇವಾ ಮನೋಭಾವ ಪ್ರವೃತ್ತಿಯಿಂದ ಸೇವೆ ಸಲ್ಲಿಸುತ್ತಿರುವ ಖ್ಯಾತ ವೈದ್ಯರಾಗಿರುವ ಡಾ| ಕುಂಞಕಣ್ಣನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಶಸ್ತ್ರಚಿಕಿತ್ಸಾ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಡಾ| ಏ. ಕೆ. ರೈ ಇವರುಗಳನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಗೌರವದ ಬಳಿಕ ಸನ್ಮಾನಿತರು ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಸತೀಶ್ ಭಂಡಾರಿ ಮಾತನಾಡಿದರು.ಉಪಕುಲಪತಿ ಪ್ರೊ| ಎಂ.ಎಸ್ ಮೂಡಿತ್ತಾಯ, ಪರೀಕ್ಷಾಂಗ ಕುಲಸಚಿವೆ ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಗಂಬಿಲದಲ್ಲಿ ಚೂರಿ ಇರಿತಕ್ಕೊಳಗಾದಾಗ ರಕ್ಷಣೆಗೆ ಧಾವಿಸಿದ್ದ ಕೆ.ಎಸ್.ಮೆಡಿಕಲ್ ಆಸ್ಪತ್ರೆಯ ದಾದಿ ನಿಮ್ಮಿ ಅವರನ್ನು ಗೌರವಿಸಲಾಯಿತು.

ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ಡೀನ್ ಡಾ| ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಆಡಳಿತ ವಿಭಾಗದ ವೈಸ್ ಡೀನ್ ಡಾ| ಕೆ. ಜಯಪ್ರಕಾಶ್ ಶೆಟ್ಟಿ, ಡಾ| ರಾಜೀವ್ ಪಿ., ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹಿರೇಮಠ್ ಸನ್ಮಾನಿತರ ವಿವರ ನೀಡಿದರು. ಕ್ಷೇಮ ಪಠ್ಯ ವಿಭಾಗದ ವೈಸ್ ಡೀನ್ ಡಾ| ಅಮೃತ್ ಮಿರಾಜ್‍ಕರ್ ವಂದಿಸಿದರು. ಡಾ| ಸಿದ್ಧಾರ್ಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version