Site icon Ullalavani

ತೊಕ್ಕೊಟ್ಟು : 2019-20ನೇ ಸಾಲಿನ ಸಂಸತ್ತಿನ ಉದ್ಘಾಟನೆ

UN NETWORKS

ತೊಕ್ಕೊಟ್ಟು : ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ಪೆರ್ಮನ್ನೂರಿನ ಪ್ರಸ್ತುತ 2019-20ನೇ ಸಾಲಿನ ಸಂಸತ್ತಿನ ಉದ್ಘಾಟನೆಯು ನಡೆಯಿತು.

ಸಮಾರಂಭದಲ್ಲಿ ಶಾಲಾ ಸಂಚಾಲಕ ಡಾ| ಫಾ| ಜೆ. ಬಿ ಸಲ್ಡಾನ, ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ, ಪ್ರಭಾರ ಶಿಕ್ಷಕಿ ಸಿಸ್ಟರ್ ಪ್ಯಾಟ್ಸಿ ಹಾಗೂ ಸಿಸ್ಟರ್ ಇವೆಂಜಲಿಸ್ತಾ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕನಾಗಿ ನಿಹಾಲ್ ಡಿ’ಸೋಜಾ, ಉಪನಾಯಕಿಯಾಗಿ ಆ್ಯಶಲ್ ಡಿ’ಸೋಜಾ, ವಿರೋಧ ಪಕ್ಷದ ನಾಯಕಿಯಾಗಿ ಮೌನ ಹಾಗೂ ಎಲ್ಲಾ ನೂತನ ಸಚಿವರಿಗೆ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾರವರಿಂದ ಪ್ರಮಾಣ ವಚನ ಬೋಧಿಸಿದರು.
ಅಧ್ಯಕ್ಷ ಡಾ| ಫಾ| ಜೆ. ಬಿ ಸಲ್ಡಾನ ಎಲ್ಲಾ ಮಂತ್ರಿಗಳಿಗೆ ಮಂತ್ರಿ ಪದವಿ ನೀಡಿ, ಅವರವರ ಜವಬ್ದಾರಿಯ ಕುರಿತು ತಿಳಿಸಿದರು.

Exit mobile version