UN NETWORKS
ನರಿಂಗಾನ : ಯೇನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜಿನ ಕ್ರಿಯಾಶಾರೀರ ಹಾಗೂ ಶಲ್ಯತಂತ್ರ ವಿಭಾಗದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯುಷ್ ಕ್ಯಾಂಪಸ್‍ನಲ್ಲಿ ನಡೆಯಿತು.
ಯೇನೆಪೊಯ ಬ್ಲಡ್ ಬ್ಯಾಂಕ್ ಮುಖ್ಯಾ„ಕಾರಿ ಡಾ| ಶರೀಫ್ ಅವರು ‘ರಕ್ತದಾನದ ಮಹತ್ವ’ ಕುರಿತಾದ ಉಪನ್ಯಾಸ ನೀಡಿದರು. ಯೇನೆಪೊಯ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಸಿ.ವಿ. ರಘುವೀರ್ ಅವರು ಮಾತಾನಾಡಿ ‘ರಕ್ತದಾನವೇ ಶ್ರೇಷ್ಠದಾನ’ ಎಂಬುದಾಗಿ ಹೇಳಿದರು. ಯೇನೆಪೊಯ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ| ಪ್ರಸನ್ನ ಐತಾಳ್ ಉಪಸ್ಥಿತರಿದ್ದರು. ಕ್ರಿಯಾ ಶಾರೀರ ವಿಭಾಗದ ಸಹಪ್ರಾಧ್ಯಪಕ ಡಾ| ಹರಿಕೃಷ್ಣ ಬಿ. ಎನ್. ಸ್ವಾಗತಿಸಿದರು. ಶಲ್ಯತಂತ್ರ ವಿಭಾಗದ ಸಹಪ್ರಾಧ್ಯಪಕ ಡಾ| ದುರ್ಗಾಪ್ರಸಾದ್ ಎ.ವಿ. ವಂದಿಸಿದರು. ಕಾಲೇಜು ವಿದ್ಯಾರ್ಥಿನಿ ಫಾತಿಮಾ ನೂಫ್ ನಿರೂಪಿಸಿದರು.