Site icon Ullalavani

ತೊಕ್ಕೊಟ್ಟು: 2019-20ನೇ ಸಾಲಿನ ರಕ್ಷಕ – ಶಿಕ್ಷಕ ಮಾಹಾಸಭೆ

UN NETWORKS

ತೊಕ್ಕೊಟ್ಟು : ಮಕ್ಕಳ ಸರ್ವಾಂಗಿಣ ಬದುಕಿಗೆ ಪೂರಕವಾದ ವಾತವರಣವನ್ನು ಮನೆಯಲ್ಲಿ ಕಲ್ಪಿಸಿಕೊಡುವ ಕಾರ್ಯ ವಿದ್ಯಾರ್ಥಿಗಳ ಹೆತ್ತವರಿಂದ ಆಗಬೇಕಾಗಿದ್ದು, ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು ಎಂದು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಧರ್ಮಗುರು ಹಾಗೂ ಶಾಲಾ ಸಂಚಾಲಕ ಡಾ| ಫಾ| ಜೆ. ಬಿ ಸಲ್ಡಾನರವರು ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ಪೆರ್ಮನ್ನೂರು. ಇದರ 2019-20ನೇ ಸಾಲಿನ ರಕ್ಷಕ – ಶಿಕ್ಷಕ ಮಾಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ತಜ್ನೆ ಡಾ| ಕೆರೋಲಿನ್ ಡಿ’ಸೋಜ ಅವರು ಪೋಷಕರನ್ನು ಉದ್ದೇಶಿಸಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ತಿಳಿಸಿದರು. ಸಂಚಾರಿ ನಿರೀಕ್ಷಕ ಸುಕುಮಾರ್ ಅವರು ಸಂಚಾರಿ ನಿಯಮದ ಕುರಿತು ಸಂಚಾರಿ ಠಾಣೆಯ ಸಿಬ್ಬಂದಿ ವರ್ಗದವರೊಂದಿಗೆ ಭಾಗವಹಿಸಿ ಮಾಹಿತಿ ನೀಡಿ ಮಕ್ಕಳು ಹಾಗೂ ರಸ್ತೆಯನ್ನು ದಾಟುವಾಗ ಮುಂಜಾಗ್ರತಾ ಕ್ರಮವನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಪೋಷಕರಿಗೆ ತಿಳಿಸಿದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಅನಿತಾ, ಪ್ರಭಾರ ಶಿಕ್ಷಕಿ ಸಿ| ಪ್ಯಾಟ್ಸಿ ಹಾಗೂ ಸಿ| ಇವ್ಯಾಜಲಿಸ್ತಾ , ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷ ನವೀನ್ ಡಿ’ಸೋಜಾ, ಕಾರ್ಯದರ್ಶಿ ಫ್ಲೋರಾ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ನೂತನ ಪದಾ„ಕಾರಿಗಳನ್ನು ಆಯ್ಕೆ ಮಾಡಲಾಯಿತು ಸಂಘದ ಉಪಾಧ್ಯಕ್ಷರಾಗಿ ನವೀನ್ ಡಿ’ಸೋಜಾ ಹಾಗೂ ಕಾರ್ಯದರ್ಶಿಯಾಗಿ ನೌಫಜ್‍ರವರು ಆಯ್ಕೆಯಾದರು.

Exit mobile version