Site icon Ullalavani

ಇರಾ : ಸಿಂಧೂರ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

UN NETWORKS

ಇರಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಇದರ ಮುಡಿಪು ವಲಯದ ಇರಾ ಕಾರ್ಯಕ್ಷೇತ್ರದ ಸಿಂಧೂರ ಜ್ಞಾನವಿಕಾಸ ಕೇಂದ್ರವನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಅವರು ಇರಾದ ಅಂಬೇಡ್ಕರ್ ಭವನ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ಶಿಕ್ಷಕಿ ನೀತಾ ಕಿರನ್‍ದಾಸ್ ಸಮಾಜ ಹಾಗೂ ಸಂಸ್ಕೃತಿ ಇವುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನವೀನ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ,ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕಿ ಮೋಹಿನಿ, ಒಕ್ಕೂಟ ಅಧ್ಯಕ್ಷ ಜಯಪ್ರಕಾಶ್ ,ಭಾಸ್ಕರ್, ಅಂಬೇಡ್ಕರ್ ಭವನದ ಆಡಳಿತ ಮಂಡಳಿ ಸದಸ್ಯರಾದ ಚಂದಪ್ಪ ಹಾಗೂ ಪದಾಧಿಕಾರಿ ರಾಘವ ಹಾಗೂ ಮನೋಜ್ ಸೇವಾ ಪ್ರತಿನಿಧಿ ಕವಿತಾ ಉಪಸ್ಥಿತರಿದ್ದರು.

Exit mobile version