Site icon Ullalavani

ಹೋಮಿಯೋಪಥಿ ಚಿಕಿತ್ಸೆ: ಶಿಬಿರಕ್ಕೆ ಚಾಲನೆ

UN NETWORKS

ಯೇನಪೊಯ : ಬಡ ಜನರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯುರ್ವೇದ ಮತ್ತು ಹೋಮಿಯೋಪಥಿ ಮಾಹಿತಿ ಮನೆ ಮನೆಗೆ ಮುಟ್ಟುವಂತೆ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ನರಿಂಗಾನ ಪಂಚಾಯತ್‌ನ ಅಧ್ಯಕ್ಷ ಇಸ್ಮಾಯಿಲ್ ಮಿನಂಕೋಡಿ ಅಭಿಪ್ರಾಯಪಟ್ಟರು.

ಯೇನಪೊಯ ಆಯುರ್ವೇದ ಮತ್ತು ಹೋಮಿಯೋಪಥಿ ಮೆಡಿ ಕಲ್ ಕಾಲೇಜು ಮತ್ತು ಆಸ್ಪತ್ರೆ ಆಯುಷ್‌ ಕ್ಯಾಂಪಸ್‌, ಕೊಲ್ಲರಕೋಡಿ ನರಿಂಗಾನ ಬಂಟ್ವಾಳ ವತಿಯಿಂದ ಕಾಲೇಜಿನ ಆಯುಷ್‌ ಕ್ಯಾಂಪಸ್‌ನಲ್ಲಿ ಅಂಗನ ವಾಡಿ ಟೀಚರ್ ಮತ್ತು ಕಚೇರಿ ಕೆಲಸಗಾರರಿಗಾಗಿ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಯೇನಪೊಯ ವಿಶ್ವ ವಿದ್ಯಾನಿಲಯದ ಕುಲಪತಿ ಡಾ| ರಘು ವೀರ್‌ ಮಾತನಾಡಿ, ಆಸ್ಪತ್ರೆ ವತಿಯಿಂದ ಇಂತಹ ಕಾರ್ಯಕ್ರಮ ಮಾಡಿದಾಗ ಬಡರೋಗಿಗಳಿಗೆ, ಜನ ಸಾಮಾನ್ಯರಿಗೆ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ.ಕ. ಇದರ ಸಹಾಯಕ ಉಪ ನಿರ್ದೇಶಕ ಉಸ್ಮಾನ್‌ ಮಾತನಾಡಿದರು.

ಯೇನಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ಪ್ರಸನ್ನ ಐತಾಳ್‌, ಯೇನಪೊಯ ಹೋಮಿಯೋಪಥಿ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ವಿವೇಕಾನಂದ ವರ್ಣೆಕರ್‌ ಉಪಸ್ಥಿತರಿದ್ದರು.ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ| ಶುಭದಾ ಮತ್ತು ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಡಾ| ಡೆಲ್ಸ್ , ಡಾ| ಇರ್ಫಾನ ರಾಹಿಲ, ಡಾ|ಅರುಣ್‌ ಮತ್ತು ಡಾ| ಚೈತ್ರಾ, ಡಾ| ಪ್ರಿಯಾ ಪ್ರದೀಪ್‌ ಮಾಹಿತಿ ನೀಡಿದರು. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ಪ್ರಸನ್ನ ಐತಾಳ್‌ ಸ್ವಾಗತಿಸಿದರು. ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿ ಆಸಿಫ್‌ ಸಯ್ಯದ್‌ ಕಿರಾಅತ್‌ ಪಠಿಸಿದರು. ಡಾ| ಶಿಲ್ಪಾ ಕೆ. ನಿರೂಪಿ ಸಿದರು. ಶಿಬಿರದ ಮುಖ್ಯಸ್ಥ ಅಬ್ದುಲ್ ರಜಾಕ್‌ ವಂದಿಸಿದರು.

Exit mobile version