UN NETWORKS
ತೊಕ್ಕೊಟ್ಟು : ಮರಗಳ ಅವಶ್ಯಕತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯೊಂದಿಗೆ ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಸದಸ್ಯರ ಮನೆಯಲ್ಲಿ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ಮೂಲಕ ಪ್ರತಿಷ್ಠಾನದ ಪದಾಧಿಕಾರಿಗಳಾದ ವೆಂಕಟಗಿರಿ ಕುಂಪಲ, ಕೃಷ್ಣ ಪೊನ್ನೊತ್ತೋಡು, ಶಿವಾಜಿ ಕುತ್ತಾರ್, ರಾಜೇಂದ್ರ ಸೇವಂತಿಗುಡ್ಡೆ, ಲಕ್ಷ್ಮೀ ನಾರಾಯಣ ಪಿಲಾರ್ ಆವರ ಮನೆಯಲ್ಲಿ ಗಿಡ ನೀಡುವುದರೊಂದಿಗೆ ನಡೆಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಗೌರವಧ್ಯಕ್ಷ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಉಪಾಧ್ಯಕ್ಷ ಮೋಹನ್ ಸಾಲ್ಯಾನ್, ಗೋಪಿನಾಥ್ ಬಗಂಬಿಲ, ನವೀನ್ ಎ.ಕೆ., ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಮಾಧ್ಯಮ ಸಂಚಾಲಕ ಪ್ರವೀಣ್ ಕುಂಪಲ, ಗೂಡುದೀಪ ನಾರಾಯಣ ಬಿ., ಸ್ವಚ್ಛತಾ ಸಂಚಾಲಕ ರಾಜೇಶ್ ಯು.ಬಿ. ಹಾಗೂ ಗುರುವಂದನಾ ಸಂಚಾಲಕ ಗಂಗಾಧರ ಅಂಬ್ಲಮೊಗರು ಉಪಸ್ಥಿತಿರಿದ್ದರು.