Site icon Ullalavani

ಮೊಂಟೆಪದವು: ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ

UN NETWORKS

ಮೊಂಟೆಪದವು: ಜಿಲ್ಲೆಯಲ್ಲಿ ನಾಲ್ಕು ಶಾಲೆಗಳ ಆಯ್ಕೆಯಾಗಿದ್ದು ಅದರ ಆಯ್ಕೆಯಲ್ಲಿ ಮೊಂಟೆಪದವು ಸೇರ್ಪಡೆಯಾಗಬೇಕಾದರೆ ಅದಕ್ಕೆ ಕಾರಣ ಮತದ ಶಕ್ತಿ. ಈ ಶಾಲೆಗೆ ಕ್ರಿಯಾ ಯೋಜನೆ ಕೊಟ್ಟರೆ ಸರಕಾರ ತಕ್ಷಣವೇ ಅನುದಾನ ಬಿಡುಗಡೆ ಮಾಡಲಿದೆ. ಕನ್ನಡ ಮಾಧ್ಯಮ ಬೆಳೆಯಬೇಕಾದರೆ ಇತರ ಮಾಧ್ಯಮಶಿಕ್ಷಕಗೌರವಿಸಬೇಕು, ಆ ನಿಟ್ಟಿನಲ್ಲಿ ಮುಂದಿನ ಮೂವತ್ತು ವರ್ಷಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಮನಗಂಡು ಜನಸಾಮಾನ್ಯರ ಮಕ್ಕಳಿಗೂ ಆಂಗ್ಲ ಭಾಷಾ ಶಿಕ್ಷಣ ಲಭಿಸುವಂತಾಗಬೇಕು ಎಂಬ ನೆಲೆಯಲ್ಲಿ ಸರಕಾರ ಬಹಳಷ್ಟು ಯೋಜನೆ ತಂದಿದ್ದು ಕರ್ನಾಟಕ ಪಬ್ಲಿಕ್ ಸ್ಕೂಲ್ ಅದರಲ್ಲಿ ಒಂದಾಗಿದೆ ಎಂದು ಜಿಲ್ಲ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿ ಆರಂಭಿಸಲಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಲ್ ಕೆಜಿ ಹಾಗೂ ಒಂದನೇ ತರಗತಿಯ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಮೊಂಟೆಪದವಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಗೊಂಡಿರುವುದು ಅತ್ಯಂತ ಸಂತೋಷದ ವಿಷಯ. ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಸರಕಾರ ಎಲ್ಲ ಸೌಲಭ್ಯ ದೊರಕಿಸಿಕೊಟ್ಟಿದೆ. ದಶಕಗಳ ಹಿಂದೆ ಶಾಲೆಯಲ್ಲಿ ಮೂಲಸೌಲಭ್ಯಗಳು ಕೊರತೆ ಎದುರಾಗಿತ್ತು. ಈಗ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿದೆ ಎಂದು ನುಡಿದರು. ಮೊಂಟೆಪದವಿನ ಪಬ್ಲಿಕ್ ಸ್ಕೂಲ್‍ಗೆ ತೊಂಬತ್ತು ಲಕ್ಷ ರೂ. ಅನುದಾನ ಮಂಜೂರಾಗಿದ್ದು ನೂತನ ಆರು ಕೊಠಡಿಗಳು ನಿರ್ಮಾಣವಾಗಲಿದೆ. ಅವಶ್ಯವಿದ್ದರೆ ಮುಂದಿನ ಯೋಜನೆಗೆ ಸರಕಾರದಿಂದ ಅನುದಾನ ತರಿಸುತ್ತೇವೆ ಎಂದರು.

ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಎಂಟು ಸಾವಿರ ಮಕ್ಕಳು ಸರಕಾರಿ ಕನ್ನಡ ಮಾಧ್ಯಮ ಶಾಲೆಯಿಂದ ದೂರವಾಗಿ ದೂರವಾಗಿದ್ದರೂ ಆಂಗ್ಲ ಭಾಷಣ ಶಿಕ್ಷಣದ ವ್ಯಾಮೋಹದ ಮೇಲೆ ಮತ್ತೆ ಸರಕಾರಿ ಶಾಲೆಯನ್ನು ಸೇರಿದ್ದಾರೆ ಎಂದು ನುಡಿದರು. ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜು ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಪ್ರೌಢಾ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಎಡಂಬಳೆ ಗೋಪಾಲ ಭಟ್, ಮಠ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶಂಕರ ಭಟ್, ಬಂಟ್ವಾಳ ತಾಲೂಕು, ಅಕ್ರಮ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಪಾರೆ, ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ,
ಸಿಆರ್ ಪಿ ಆಶಾ, ಮಾಜಿ ಒಂಬುಡ್ಸುಮೆನ್ ಶೀನ ಶೆಟ್ಟಿ, ಬಿ. ನಾರಾಯಣ ಶೆಟ್ಟಿ, ಸದಸ್ಯರಾದ ಅಬ್ದುಲ್ ರಹಿಮಾನ್, ಸೆಪಿಯಾ ಖಾಸಿಂ, ಅಬ್ದುಲ್ ಅಹ್ಮದ್, ಬಶೀರ್, ಫಯಾಝ್, ಜಯಂತಿ, ಸುಜಾತ, ಸರೋಜಿನಿ, ಹಮೀದ್ ಚಂದುಹಿತ್ಲು, ಲತೀಫ್ ಕಾಪಿಕಾಡ್, ಮೋರಿ ಮೋನು, ಕಟ್ಟಪುಣಿ ಖಾದಿರಿ, ಅಬ್ಬಾಸ್ ಮಜಲು, ಕೆ.ಜೆ. ಗಟ್ಟಿ, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಅಬೂಬಕ್ಕರ್ ಆಳ್ವರಬೆಟ್ಟು, ಚಂದ್ರಶೇಖರ್ ಮರಿಕ್ಕಳ, ಐತಪ್ಪ ಶೆಟ್ಟಿ ಆಳ್ವರ ಬೆಟ್ಟು, ಹನೀಫ್ ಚಂದುಹಿತ್ಲು ಹಾಗೂ ಮೊಂಟೆಪದವು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕುಕ್ಕ ಎಂ. ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಮಹಮ್ಮದ್ ಉಪಸ್ಥಿತರಿದ್ದರು. ಕಾಲೇಜು ಪ್ರಿನ್ಸಿಪಾಲ್ ವನಿತಾ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ಲಕ್ಷ್ಮಣ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲ ಸಂತೋಷ್ ಕುಮಾರ್ ಟಿ.ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಎಂಟು ಸಾವಿರ ಮಕ್ಕಳು ಸರಕಾರಿ ಕನ್ನಡ ಮಾಧ್ಯಮ ಶಾಲೆಯಿಂದ ಆಂಗ್ಲ ಭಾಷಣ ಶಿಕ್ಷಣದ ವ್ಯಾಮೋಹದ ಮೇಲೆ ಮತ್ತೆ ಸರಕಾರಿ ಶಾಲೆಯನ್ನು ಸೇರುವಂತಾಗಿದೆ. ಸರಕಾರ ಎಲ್ಲ ವ್ಯವಸ್ಥೆ ಮಾಡಿಯೂ ಪೆÇೀಷಕರು ಆಂಗ್ಲ ಮಾಧ್ಯಮದತ್ತ ವಾಲುವುದನ್ನು ಗಮನಿಸಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ಒಂದೇ ಕ್ಯಾಂಪಸ್ ನಲ್ಲಿದ್ದರೆ ಎಲ್ ಕೆ ಜಿ ಯುಕೆಜಿ ಸೇರಿದಂತೆ ಎಲ್ ಕೆ ಜಿ ಯಿಂದ ಪಿಯುಸಿ ತನಕ ಹದಿನಾಲ್ಕು ವರ್ಷದ ಶಿಕ್ಷಣ ಸರಕಾರಿ ಕಾಲೇಜಿನಲ್ಲಿ ಸಿಗಲಿದೆ. ರಾಜ್ಯದಲ್ಲಿ ಹೊಸದಾಗಿ ತೆರೆಯಲ್ಪಟ್ಟ ಪಬ್ಲಿಕ್ ಸ್ಕೂಲ್ ಆರಂಭಗೊಂಡ ಜಿಲ್ಲೆಯ ನಾಲ್ಕು ತರಗತಿಗಳಲ್ಲಿ ಬಂಟ್ವಾಳ ಶೈಕ್ಷಣಿಕ ತಾಲೂಕಿನಲ್ಲಿ ಮೊಂಟೆಪದವು ಪಬ್ಲಿಕ್ ಸ್ಕೂಲ್ ಕೂಡಾ ಒಂದಾಗಿದೆ ಎಂದು ನುಡಿದರು.

ಒಂದು ಮಗುವನ್ನು ಖಾಸಗಿ ಶಾಲೆಗೆ ಸೇರಿದರೆ ಪಿಯುಸಿ ತನಕ ಕನಿಷ್ಟವೆಂದರೂ ಏಳು ಲಕ್ಷ ತನಕ ಖರ್ಚು ವೆಚ್ಚವಾದರೆ ಪಬ್ಲಿಕ್ ಸ್ಕೂಲ್ ಸೇರಿದ ಮಗುವಿನಿಂದಾಗಿ ಪೋಷಕರು ಏಳು ಲಕ್ಷ ರೂ. ಉಳಿಸಿದಂತಾಗುತ್ತದೆ. ಸರಕಾರದ ಕನ್ನಡ ಮಾಧ್ಯಮದ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಸಿಗುವಂತೆಯೇ ಪಬ್ಲಿಕ್ ಸ್ಕೂಲ್ ನ ಆಂಗ್ಲ ಮಾಧ್ಯಮ ಶಿಕ್ಷಣದಲ್ಲೂ ಎಲ್ಲ ಸೌಲಭ್ಯ ಸಿಗುತ್ತದೆ. ಫಿನ್ ಲ್ಯಾಂಡ್ ದೇಶ ತಂದಿರುವಂತಹ ನಲಿ-ಕಲಿ, ಪ್ತೌಢ ಶಾಲೆಯಲ್ಲಿ ಪದವಿಪೂರ್ವ ಕಾಲೇಜಿನಲ್ಲೂ ಉತ್ತಮ ಶಿಕ್ಷಣ ಸೌಲಭ್ಯ ಸಿಗಲಿದೆ. ಇಂದಿನಿಂದ ಈ ಶಾಲೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರು ಪಡೆಯಲಿದೆ. ವಿಶೇಷವೆಂದರೆ ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಪ್ರವೇಶ ಪಡೆಯಲು ತುಂಬ ತ್ರಾಸದಾಯಕವಾಗಲಿದ್ದು ಅಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂದರು. ವಿಟ್ಲ ಮಾದರಿ ಶಾಲೆಯಲ್ಲಿ 1010ಮಕ್ಕಳಿದ್ದು ಅದು ಹೊರತುಪಡಿಸಿ ಇಲ್ಲಿ 950ಮಕ್ಕಳಿದ್ದಾರೆ. ಶಾಲೆಗೆ 50ಲಕ್ಷ ರೂ. ಗಳಿಂದ ಒಂದು ಕೋಟಿ ರೂ. ವೆಚ್ಚದ ಹೈಟೆಕ್ ಅಡುಗೆ ಕೋಣೆ, ಐನೂರು ವಿದ್ಯಾರ್ಥಿಗಳು ಎರಕಕಾಲದಲ್ಲಿ ಊಟ ಮಾಡಲು ಕುಳಿತುಕೊಳ್ಳುವ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ,ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ನಿರ್ಮಾಣವಾಗಲಿದೆ. ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಒಂದೇ ಆಗಲಿದೆ. ವಾಹನ ವ್ಯವಸ್ಥೆ ಆಗಲಿದೆ. ಬಯೋಮೆಟ್ರಿಕ್ ವ್ಯವಸ್ಥೆ ಆಗಲಿದೆ. ಎಲ್ ಕೆ ಜಿ ಯಿಂದ ಪಿಯುಸಿ ತನಕ ಮುಖ್ಯಸ್ಥರಾಗಿ ಕಾಲೇಜು ಪ್ರಿನ್ಸಿಪಾಲ್, ಉಪ ಪ್ರಾಂಶುಪಾಲರು ಎಲ್ ಕೆ ಜಿ ಯಿಂದ ಎಂಟನೆಯ ತರಗತಿ ತನಕ ನೋಡುಕೊಳ್ಳಲಿದ್ದಾರೆ. ಕ್ರೀಡಾಚಟುವಟಿಕೆಗಳಿಗೆ ಅನುದಾನದ ಕೊರತೆ ಎದುರಾಗದು. ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲು ಉತ್ತಮ ಸಮಿತಿ ರಚನೆ ಆಗಬೇಕಿದ್ದು ಆ ಮೂಲಕ ಶಾಲೆಯ ಸರ್ವತೋಮುಖ ಅಭಿವೃದ್ಧಿ ಕಾಣಲಿದೆ.
ಶಿವಪ್ರಕಾಶ್
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು

Exit mobile version