Site icon Ullalavani

ಸೋಮೇಶ್ವರ: ಆನಂದಾಶ್ರಮ ಶಾಲೆಯಲ್ಲಿ ಯೋಗ ದಿನಾಚರಣೆ

UN NETWORKS

ಸೋಮೇಶ್ವರ: ಆನಂದಾಶ್ರಮ ಪ್ರೌಡಶಾಲೆ ಸೋಮೇಶ್ವರದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅರ್ತಿಥಿಗಳಾಗಿ ನಿವೃತ್ತ ಸೇನಾನಿ ಕೆ.ಸಿ. ನಾರಾಯಣ್, ಶಾಲಾ ಶಿಕ್ಷಕ ರಕ್ಷಕದ ಸಂಘದ ಅಧ್ಯಕ್ಷ ಶಂಕರನಾರಾಯಣಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ, ಕಾರ್ಯದರ್ಶಿ ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕಿ ಗುರುಮೂರ್ತಿ ಪಿ., ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನರಿಂಗಾನ ಹಿ.ಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.ದೈಹಿಕ ಶಿಕ್ಷಕ ಗಣೇಶ್ ಸ್ವಾಗತಿಸಿದರು. ಶಿಕ್ಷಕ ಗೋಪಾಲರ್ಕಷ್ಣ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗಾಯತ್ರಿ ಅದ್ಯಪಾಡಿ ವಂದಿಸಿದರು.

Exit mobile version