Site icon Ullalavani

ಕಣಚೂರು: ವಿದ್ಯಾರ್ಥಿನಿ ಸಂಘ ಉದ್ಘಾಟನೆ

UN NETWORKS

ಕಣಚೂರು : ವಿದ್ಯಾರ್ಥಿನಿಯರು ಶ್ರಮಪಟ್ಟು ಕಲಿತರೆ ಮುಂದಿನ ಜೀವನ ಸುಖಮಯವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ವಿದ್ಯಾರ್ಥಿನಿಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರಬೇಕು ಎಂದು ಕಣಚೂರು ವಿಧ್ಯಾಸಂಸ್ಥೆಯ ಅಧ್ಯಕ್ಷ ಯು.ಕೆ ಮೋನು ಅಭಿಪ್ರಾಯಪಟ್ಟರು.

ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು ದೇರಳಕಟ್ಟೆ ವಿದ್ಯಾರ್ಥಿನಿ ಸಂಘದ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಅವಕಾಶಗಳ ಸದುಪಯೋಗವನ್ನು ಮಾಡಿಕೊಂಡು ವಿದ್ಯಾಸಂಸ್ಧೆಯ ಕೀರ್ತಿಯನ್ನು ಬೆಳಗುವುದರೊಂದಿಗೆ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುವಂತಾಗಬೇಕು ಎಂದರು. ಕಣಚೂರು ಮ್ಯಾನೇಜ್ ಮೆಂಟ್ ಆಂಡ್ ಸೈನ್ಸ ನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮದ್ ಯು.ಟಿ., ಕಣಚೂರು ಹೈಸ್ಕೂಲ್‍ನ ಪ್ರಾಂಶುಪಾಲ ವಿನೀತ ಗಾಮ ರೋಸ್ ಮಥಾಯಸ್, ಕಣಚೂರು ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಆನಂದಿ ಹಾಗೂ ಕಣಚೂರು ಪೂರ್ವ ಪ್ರಾಥಮಿಕ ಹಾಗು ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯನಿ ಲಿನೆಟ್ ಡಿ’ಸೋಜ ಉಪಸ್ಧಿತರಿದ್ದರು.

ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾರವರು ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಫ್‍ಶೀನ ಸ್ವಾಗತಿಸಿದರು ಹಾಗು ಆಯಿಶಾ ಜುಮೈನಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾದ ನೆಬಿಸಾ ಮುನೀಮರವರು ಧನ್ಯವಾದ ಸಮರ್ಪಿಸಿದರು.

Exit mobile version