UN NETWORKS
ಹರೇಕಳ : ಸೌಜನ್ಯ ಸ್ಕೌಟ್ ದಳ, ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳ ಮತ್ತು ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಮಂಗಳೂರು ಆಶ್ರಯದಲ್ಲಿ ಇಂದು ಪ್ರೌಢಶಾಲಾ ಸಭಾಂಗಣದಲ್ಲಿ “ವಿಶ್ವ ಯೋಗ ದಿನಾಚರಣೆ”ಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಸದಸ್ಯರಾದ ಕಡೆಂಜ ಸೋಮಶೇಖರ್ ಚೌಟ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರವೀಂದ್ರ ರೈಯವರು ಯೋಗ ನಮ್ಮ ದೇಶದ ಅತ್ಯಂತ ಪ್ರಾಚೀನ ವಿದ್ಯೆಯಾಗಿದ್ದು, ಅದರ ಔಚಿತ್ಯ ಇಂದಿನ ಕಾಲದಲ್ಲಿ ಅತ್ಯಂತ ಅಗತ್ಯವಾಗಿದೆ. ಇದೊಂದು ಆರೋಗ್ಯವರ್ಧಕವಾಗಿದ್ದು, ಮಕ್ಕಳು ತನ್ನ ದೈನಂದಿನ ಜೀವನದಲ್ಲಿ ಈ ವಿದ್ಯೆಯನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.ನಂತರ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸದಸ್ಯರಾದ ಸೂರ್ಯ ಪ್ರಕಾಶ್ ಪಕ್ಕಳ, ಸುನೀತ ಉದಯ ಕುಮಾರ್, ಸುರೇಖ, ಅಕ್ಷಯ ಕೃಷ್ಣ ಮಕ್ಕಳಿಗೆ ಯೋಗ ತರಬೇತಿ ನೀಡಿದರು. ಅತಿಥಿಗಳಾಗಿ ಕೆ.ಎಸ್. ಹೆಗ್ಡೆ ವೈದ್ಯಾಧಿಕಾರಿಗಳಾದ ಡಾ. ಗೀತಾಂಜಲಿ ಹಾಗೂ ಡಾ. ಸುಜನ ಶುಭವನ್ನು ಕೋರಿದರು. ಅಧ್ಯಾಪಕರಾದ ಕೃಷ್ಣಶಾಸ್ತ್ರಿ ಪ್ರಾರ್ಥಿಸಿದರು. ಶಿಕ್ಷಕರಾದ ರವಿಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಮಕ್ಕಳಿಗೆ ಯೋಗ ಸಂಕಲ್ಪ ನೆರವೇರಿಸಿ ಕಾರ್ಯಕ್ರಮ ನಿರೂಪಿಸಿದರು.