Site icon Ullalavani

ಮಂಜನಾಡಿ : ಬಿಶಾರತುಲ್ ಮದೀನಾಕ್ಕೆ ಪದಾಧಿಕಾರಿಗಳ ಆಯ್ಕೆ

UN NETWORKS

ಮಂಜನಾಡಿ : ಮಂಜನಾಡಿಯ ಅಲ್ ಮದೀನ ದಅ್ ವಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಂಘಟನೆ ಬಿಶಾರತುಲ್ ಮದೀನಾಕ್ಕೆ 2019-20ನೇ ಶೈಕ್ಷಣಿಕ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಿಝಾರ್ ಬಕ್ರವಳ್ಳಿ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಕಲ್ಮಿಂಜ, ಕೋಶಾಧಿಕಾರಿ ಅಬ್ದುಲ್ ಸಮದ್ ಪರಪ್ಪು, ಉಪಾಧ್ಯಕ್ಷರಾಗಿ ಶಫೀಕ್ ಬೊಳ್ಮಾರ್ ಆಯ್ಕೆಗೊಂಡರು.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ ಉಧ್ಘಾಟಿಸಿದರು. ದಅ್ ವಾ ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ, ಮುನೀರ್ ಸಖಾಫಿ, ಇರ್ಫಾನ್ ನೂರಾನಿ, ಅಶ್ರಫ್ ಸಖಾಫಿ, ರಝಾಖ್, ಇಕ್ಬಾಲ್ ಮರ್ಝೂಖಿ, ಜುನೈದ್ ಮರ್ಝೂಖಿ ಮತ್ತಿತರು ಉಪಸ್ಥಿತರಿದ್ದರು. ನಿಕಟ ಪೂರ್ವ ಕಾರ್ಯದರ್ಶಿ ಶರೀಫ್ ವಲಾಲ್ ವರದಿ ವಾಚಿಸಿದರು. ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿದರು. ಹನೀಫ್ ಕುಂಜತ್ತೂರು ವಂದಿಸಿದರು.

Exit mobile version