Site icon Ullalavani

ಉಳ್ಳಾಲ : ನ್ಯೂ.ಬಿ.ಫ್ರೀ ಸ್ಕೂಲ್ ನಲ್ಲಿ “ಇಕ್ರಾ”ಡೇ ಕಾರ್ಯಕ್ರಮದ ಉದ್ಘಾಟನೆ

UN NETWORKS

ಉಳ್ಳಾಲ : ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ ಸ್ಕೂಲ್ ನಲ್ಲಿ “ಇಕ್ರಾ”ಡೇ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮನಶಾಸ್ತ್ರೀಯವಾಗಿ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಆಧುನಿಕ ಶೈಲಿಯಲ್ಲಿ ಕಲಿಸುವಂತಹ ವಿಶೇಷ ಕಲಿಕಾ ಸೌಲಭ್ಯವಿರುವಂತಹ ಪ್ರೀ ಸ್ಕೂಲ್ ಆಗಿದೆ ನ್ಯೂ.ಬಿ. ಇದನ್ನು ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ನಡೆಸಿಕೊಂಡು ಬರುತ್ತಿದೆ ಎಂದರು. ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ ಸ್ಕೂಲ್‍ನ ಅಧ್ಯಕ್ಷ ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸುಂದರಿಭಾಗ್ ಜುಮಾ ಮಸೀದಿಯ ಖತೀಬರಾದ ಶರೀಫ್ ಸಅದಿ ದುಆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಮಂಜನಾಡಿ ಅಲ್ ಮದೀನದ ನಿರ್ದೇಶಕರಾದ ಮುಹಮ್ಮದ್ ಕುಂಞ ಅಂಜದಿ, ದ.ಕ.ಜಿಲ್ಲಾ ಎಸ್,ವೈ.ಎಸ್. ಕೋಶಾಧಿಕಾರಿ ಹನೀಫ್ ಹಾಜಿ, ಜಲಾಲುದ್ದೀನ್ ತಂಙಳ್, ಫಾರೂಕ್, ತಾಜುದ್ದೀನ್, ರಮೀಝ್, ಸತ್ತಾರ್, ಮೊದಲಾದವರು ಉಪಸ್ಥಿತರಿದ್ದರು.

ಉಳ್ಳಾಲ ಬ್ಲಿಸ್ ಮೌಂಟೈನ್ ಎಜುಕೇಶನಲ್ ಪಾರ್ಕ್ ಸಂಸ್ಥೆಯ ನ್ಯೂ.ಬಿ.ಫ್ರೀ ಸ್ಕೂಲ್‍ನ ಮೆನೇಜಿಂಗ್ ಡೈರೆಕ್ಟರ್ ಕುಬೈಬ್ ತಂಗಳ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮುನೀರ್ ಸಖಖಾಫಿ ಪ್ರಾಸ್ತವಿಕವಾಗಿ ಮಾತನಾಡಿದರು, ಹಾಶೀರ್ ಕಾರ್ರ್ಯಕ್ರಮ ನಿರೂಪಿಸಿದರು.

Exit mobile version