Site icon Ullalavani

ತಲಪಾಡಿ : ಶಾರದಾ ಆಯುರ್ವೇದ ಆಸ್ಪತ್ರೆ, ಉಚಿತ ಅಸ್ಥಿ (ಮೂಳೆ) ಸಾಂದ್ರತಾ ತಪಾಸಣಾ ಶಿಬಿರ

UN NETWORKS

ತಲಪಾಡಿ : ಬೆನ್ನು ನೋವು, ಸೊಂಟ ನೋವು ಸೇರಿದಂತೆ ಮೂಳೆ ಸವೆತದಿಂದ ತೊಂದರೆಯಾದ ರೋಗಿಗಳಿಗೆ ಈ ಶಿಬಿರ ಪೂರಕವಾಗಿದ್ದು, ಈಗಿರುವ ನೋವು ಶಮನ ಮತ್ತು ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂತಹ ಶಿಬಿರದಲ್ಲಿ ಭಾಗವಹಿಸಿದರಿಗೆ ಸಹಕಾರಿಯಾಗಲಿದೆ ಎಂದು ಶಾರದಾ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ| ರವಿಗಣೇಶ್ ಮೊಗ್ರ ಅಭಿಪ್ರಾಯಪಟ್ಟರು.

ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆ ಮತ್ತು ಬೆಂಗಳೂರಿನ ಮೆಡಿಲ್ಯಾಬ್ ಇಂಡಿಯಾ ಸಂಸ್ಥೆಯ ಸಂಟಿ ಆಶ್ರಯದಲ್ಲಿ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಉಚಿತ ಅಸ್ಥಿ (ಮೂಳೆ) ಸಾಂದ್ರತಾ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಶಿಬಿರದಲ್ಲಿ ಸುಮಾರು 100ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿ ಚಿಕಿತ್ಸೆ ಮತ್ತು ಸಲಹೆಯನ್ನು ಪಡೆದುಕೊಂಡರು. ಶಿಬಿರದಲ್ಲಿ ತಜ್ಞ ವೈದ್ಯ ಡಾ| ರವಿಗಣೇಶ್ ಮೊಗ್ರ ಕಾಯಚಿಕಿತ್ಸಾ ಮತ್ತು ಪಂಚಕರ್ಮ ವಿಭಾಗದ ಡಾ| ಅಮೃತ ಟಿ. ಟಿ. ಮತ್ತು ಡಾ| ನಿಖಿಲ್ ಚಂದ್ರನ್ ಸಿ. ಇವರ ಸಲಹೆಯನ್ನು ಪಡೆದರು.

Exit mobile version