UN NETWORKS
ಉಳ್ಳಾಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಭಜನಾ ಸಂಚಾಲಕ ದಿ| ಸಂಜೀವ ಕುಲಾಲ್ ಅವರ ಶ್ರದ್ಧಾಂಜಲಿ ಸಭೆ ಕುಂಪಲದ ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಯೇನೆಪೋಯ ಮುಖ್ಯಸ್ಥ ಫರ್ಹಾದ್ ನುಡಿನಮನ ಸಲ್ಲಿಸಿದರು. ಮಂದಿರದ ಪೋಷಕ ಕೇಶವದಾಸ್, ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿ ಗೋಪಾಲ ಕುತ್ತಾರ್, ಜಿ.ಪಂ ಸದಸ್ಯೆ ಧನಲಕ್ಷೀ ಗಟ್ಟಿ, ಯೋನೆಪೋಯ ವಿ.ವಿ.ಯ ಮಾನವ ಸಂಪನ್ಮೂಲ ಅಧಿಕಾರಿ ಮಹಾಬಲ ಆಳ್ವ, ಟೈಲರ್ ಅಸೋಸಿಯೇಷನ್ ನ ಕೆ.ಎಸ್.ಆನಂದ್, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಹಿಂದು ಜಾಗರಣ ವೇದಿಕೆಯ ಪ್ರಕಾಶ್ ಕುಂಪಲ, ಬಾಲಕೃಷ್ಣ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬಿ.ಜೆ., ಮೋಹನ್ ಶೆಟ್ಟಿ, ಮಹಿಳಾ ಪ್ರಮುಖರಾದ ಮಾಲತಿ ಕೇಶವದಾಸ್, ಸುಜಾತ ಶೆಟ್ಟಿ, ಶಶಿಕಲಾ ಗಣೇಶ, ಜಯಲಕ್ಷೀ ಬಿ.ಜೆ., ವಿನಯ ಪ್ರಭಾಕರ್ ಹಾಗೂ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ಮಂದಿರದ ಸದಸ್ಯರು ಉಪಸ್ಥಿತರಿದ್ದರು.