Site icon Ullalavani

ದೇರಳಕಟ್ಟೆ: ಅಬ್ರಾರ್ ವುಮೆನ್ಸ್ ಕಾಲೇಜು ಉದ್ಘಾಟನೆ

UN NETWORKS

ಉಳ್ಳಾಲ: ಆಧುನಿಕ ಯುಗದಲ್ಲಿ ಯುವತಿಯರು ದಾರಿ ತಪ್ಪಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಅಬ್ರಾರ್ ವುಮೆನ್ಸ್ ಕಾಲೇಜ್‍ನಂತಹ ಸಂಸ್ಥೆಗಳ ಅಗತ್ಯವಿದೆ. ಇದರಿಂದ ಮಹಿಳೆಯರಿಗೆ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಅವಕಾಶ ಸಿಗುತ್ತದೆ. ಇಂತಹ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಸಯ್ಯದ್ ಹಬೀಬುಲ್ಲಾ ತಂಙಳಾ ಪೆರುವಾಯಿ ಹೇಳಿದರು.

ಅವರು ದೇರಳಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡ ಅಬ್ರಾರ್ ವುಮೆನ್ಸ್ ಕಾಲೇಜನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬೂಬಕರ್ ಹಾಜಿ ದೇರಳಕಟ್ಟೆ, ಸಯ್ಯದ್ ಆಲವಿ ತಂಙಳ್ ಕಿನ್ಯ, ಎ.ಕೆ. ರಹೀಂ ಅಂಮ್ಜದಿ ಹೊನ್ನಾವರ, ಅಬೂಬಕರ್ ಸಖಾಫಿ ತೋಕೆ, ಹಸನ್ ಹಾಜಿ ಸಾಂಬಾರ್ ತೋಟ, ಇಸುಬು ಬಾವ ಮೊದಲಾದವರು ಉಪಸ್ಥಿತರಿದ್ದರು. ಆರ್.ಕೆ. ಮದನಿ ಅಮ್ಮೆಂಬಳ ಸ್ವಾಗತಿಸಿ ವಂದಿಸಿದರು. ಸಂಸ್ಥೆಯ ಪ್ರಾಂಶುಪಾಲ ಸ್ವಾದೀಕ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Exit mobile version