Site icon Ullalavani

ಯುವತಿ ಅಸ್ವಸ್ಥ ಸಾವು

UN NETWORKS

ಉಳ್ಳಾಲ : ಹೊಟ್ಟೆನೋವಿನಿಂದ ಅಸ್ವಸ್ಥಳಾದ ಯುವತಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಎಂಬಲ್ಲಿ ಸಂಭವಿಸಿದೆ.

ಕೊಲ್ಯ ನಿವಾಸಿ ಹರೀಶ್ ಹರ್ಷಿತಾ (20) ಸಾವನ್ನಪ್ಪಿರುವಾಕೆ. ಹೊಟ್ಟೆನೋವು ಎಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಹರ್ಷಿತಾ ಸಾವನ್ನಪ್ಪಿದ್ದಾಳೆ. ಹಿಮೋಗ್ಲೋಬಿನ್ ನಲ್ಲಿ ತೀರಾ ವ್ಯತ್ಯಾಸ ಉಂಟಾಗಿ ಸಾವನ್ನಪ್ಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶವ ಮಹಜರು ವರದಿ ಬಂದ ಬಳಿಕವಷ್ಟೇ ಕಾರಣ ಬೆಳಕಿಗೆ ಬರಲಿದೆ. ಆರು ತಿಂಗಳ ಹಿಂದೆಯಷ್ಟೇ ಹರ್ಷಿತಾ ತಾಯಿಯೂ ಸಾವನ್ನಪ್ಪಿದ್ದರು. ತಂದೆ, ಸಹೋದರಿ ಹಾಗೂ ಸಹೋದರನ ಜತೆಗೆ ವಾಸಿಸುತ್ತಿದ್ದರು.

Exit mobile version