UN NETWORKS
ಕೊಣಾಜೆ :ಸಮಾಜಕ್ಕೆ ರಚನಾತ್ಮಕವಾದ ಉತ್ತಮ ಕೊಡುಗೆ ನೀಡುವ ಪದವೀಧರರಾಗಿ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಯುವ ಇಂಜಿನಿಯರಿಂಗ್ ಪದವೀಧರರಿಗೆ ಕರೆ ನೀಡಿದ್ದಾರೆ.
ವಿಶ್ವ ವಿದ್ಯಾನಿಯ ಕಾಲೇಜಿನ ಮಂಗಳ ಸಭಾಂಗಣದಲ್ಲಿಂದು ಬ್ಯಾರೀಸ್ ಇನ್‍ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 7ನೆಪದವಿ ಪ್ರದಾನ ಸಮಾರಂಭವನ್ನು ಅವ ರು ಇಂದು ಉದ್ಘಾಟಿಸಿ,ಬಿಐಟಿ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಮಾತನಾಡುತ್ತಿದ್ದರು. ಬಿಐಟಿ ಉತ್ತಮ ಶಿಸ್ತು ಬದ್ಧ ಹಾಗೂ ಶೈಕ್ಷಣಿಕ ಮೌಲ್ಯಗಳೊಂದಿಗೆ ಪ್ರತಿಷ್ಠಿತ ಸಂಸ್ಥೆಯಾಗಿ ಸೈಯ್ಯದ್ ಮುಹಮ್ಮದ್ ಬ್ಯಾರಿಯವರ ನೇತ್ರತ್ವದಲ್ಲಿ ಬೆಳೆದು ಬಂದಿರುವುದು ಅಭಿನಂದನಾರ್ಹ ಎಂದು ಪಿ.ಎಸ್ . ಎಡಪಡಿತ್ತಾಯ ಶುಭಹಾರೈಸಿ ದರು.ವಿದ್ಯಾರ್ಥಿ ಗಳು ಪದವಿಯ ಜೊತೆ ಸಮಾಜದ ಶಾಂತಿ,ಸೌಹಾರ್ದತೆ ಹಾಗೂ ನಮಗೆಲ್ಲಾ ಆಸರೆಯಾಗಿರುವ ಪ್ರಕ್ರತಿಯ ಸಂರಕ್ಷಣೆ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕ ರ ಸಲಹೆಗಾ ರರಾದ ಪ್ರೊ .ಬಿ.ಎನ್. ರಘು ನಂದನ್ ಪ್ರದಾನ ಭಾಷಣಕಾರ ರಾಗಿ ಭಾಗವ ಹಿಸಿದ್ದರು. ಸಮಾರಂಭದ ಅಧ್ಯಕ್ಷ ತೆಯನ್ನು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಸೈಯ್ಯದ್ ಮುಹ ಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬಿಐಟಿ ಪಾಲಿಟೆಕ್ನಿಕ್ ನ ನಿರ್ದೇಶಕ ಡಾ.ಅಜೀಜ್ ಮುಸ್ತಫಾ,ಡಾ.ಮುಸ್ತಾಫ ಬಸ್ತಿಕೋಡಿ, ಬಸವರಾಜ್, ಪುರುಷೋತ್ತಮ, ಬಿಐಟಿ ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥರಾ ದ, ಡಾ.ಅಬ್ದುಲ್ಲಾ ಗುಬ್ಬಿ ಹಾಗೂ ವಿವಿಧ ವಿಭಾ ಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಬಿಐಟಿ ಪ್ರಾಂಶುಪಾಲ ಡಾ.ಪಿ. ಮಹಾಬಲೇಶ್ವರಪ್ಪ ಸ್ವಾಗತಿಸಿದರು.