Site icon Ullalavani

ಜೂ.14: ಕಲ್ಕಟ್ಟ ಇಲ್ಯಾಸ್ ಜುಮಾ‌ ಮಸೀದಿಯ ಖಾಝಿಯಾಗಿ ಕೂರ ತಂಙಳ್ ಅಧಿಕಾರ ಸ್ವೀಕಾರ

UN NETWORKS

ಉಳ್ಳಾಲ : ಖುರ್ರಸ್ಸಾದಾತ್ ಅಸ್ಸಯ್ಯಿದ್ ಕೂರತ್ ತಂಙಳ್ ರವರನ್ನು ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯ ಖಾಝಿಯಾಗಿ ಸ್ವೀಕಾರ ಸಮಾರಂಭ ಜೂನ್ 14ಶುಕ್ರವಾರ ಅಸರ್ ನಮಾಝಿನ ಬಳಿಕ ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆಯಲ್ಲಿ ತಾಜುಶ್ಯರೀಅ ಎಂ.ಅಲಿ ಕುಂಞ ಉಸ್ತಾದ್ ಖಾಝಿ ಸಮರ್ಪಣೆ ಮಾಡಲಿದ್ದಾರೆ. ಝೈನುಲ್‌ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಸಚಿವ ಯು.ಟಿ ಖಾದರ್, ಕೆ.ಎ ರಝ್ವೀ ಕಲ್ಕಟ್ಟ, ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಸೀದಿ ಉಪಾಧ್ಯಕ್ಷ ಹಾಜಿ ಮಹ್ಮೂದ್ ಕಂಡಿಕ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version