UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಯ ವಿಚಾರದಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಿದ್ದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಎಂಟು ವರ್ಷಗಳಿಂದ ಜನರನ್ನು ಕಾಡುತ್ತಿರುವ ತೊಕ್ಕೊಟ್ಟು ಮೇಲ್ಸೇತುವೆ ಹಲವು ಗಡುವುಗಳ ಬಳಿಕ ಕೊನೆಗೂ ಪೂರ್ಣಗೊಂಡಿದೆ. ಜೂನ್ 10ರಂದು ಸಾರ್ವಜನಿಕರಿಗೆ ಸಮರ್ಪಣೆಯಾಗಲಿದೆ ಎನ್ನುವಷ್ಟರಲ್ಲಿ ಉಳ್ಳಾಲ ತಿರುವಿನಲ್ಲಿನ ಅಪಾಯವನ್ನು ಎತ್ತಿ ಹಿಡಿದ ಸಚಿವ ಯು.ಟಿ.ಖಾದರ್ ಅವರು, ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಸಂಸದರು, ಅಧಿಕಾರಿಗಳ ಜೊತೆ ಸಭೆ ನಿಗದಿಪಡಿಸಿದ್ದರು. ಆದರೆ ನಿಗದಿತ ದಿನದಂದು ಸಭೆ ನಡೆದಿಲ್ಲ. ಈ ನಡುವೆ ರಾ.ಹೆ. ಯೋಜನಾ ನಿರ್ದೇಶಕ ಹಾಗೂ ಕಿರಿಯ ಇಂಜಿನಿಯರ್ ದೆಹಲಿಯಿಂದಲೇ ವರ್ಗಾವಣೆ ಪಡೆದಿದ್ದಾರೆ. ಇನ್ನೇನಿದ್ದರೂ ಜೂನ್ 14 ಅಥವಾ 15ರಂದು ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಖಾದರ್ ತಿಳಿಸಿದ್ದರು.
ಈ ನಡುವೆ ಇಂದು ಬೆಳಗ್ಗೆ 8.30ಕ್ಕೆ ಮೇಲ್ಸೇತುವೆ ಉದ್ಘಾಟನೆಗೆ ಸಂಸದರು ಏಕಾಏಕಿ ದಿನ ನಿಗದಿಗೊಳಿಸಿ ಅಚ್ಚರಿ ಮೂಡಿಸಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಈ ನಿರ್ಧಾರವೂ ಬದಲಾಗಿದೆ. ಜೂನ್ 13ರಂದು ಉದ್ಘಾಟನೆಗೆ ಇನ್ನೊಂದು ದಿನಾಂಕ ನಿಗದಿಪಡಿಸಲಾಗಿದೆ.