Site icon Ullalavani

ಹರೇಕಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ

UN NETWORKS

ಹರೇಕಳ : ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಜಯ ಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹರೇಕಳ ಗ್ರಾಮ ಸಮಿತಿಯಿಂದ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ವಿಜಯೋತ್ಸವ ದೆಬ್ಬೇಲಿಮಾರ್ ಗದ್ದೆಯಲ್ಲಿ ನಡೆಯಿತು.

ಕೊಣಾಜೆ ಮಹಾಶಕ್ತಿ ಕೇಂದ್ರದ ಹರೇಕಳ ಗ್ರಾಮ ಸಮಿತಿಯಿಂದ ನಡೆದ ಕಾರ್ಯಕ್ರಮದ ನೇತೃತ್ವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿದ್ದರು. ಬಿಜೆಪಿ ಹರೇಕಳ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಧರ ಆಳ್ವ ದೆಬ್ಬೇಲಿ ಲಚ್ಚಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಪಕ್ಷದ ಪ್ರಮುಖರಾದ ಚಂದ್ರಹಾಸ್ ಪಂಡಿತ್ ಹೌಸ್, ತಾ.ಪಂ.ಸದಸ್ಯ ನವೀನ್ ಪಾದಲ್ಪಾಡಿ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶೆಟ್ಟಿ, ದಾಮೋದರ ಗಟ್ಟಿ ಬೈತಾರ್, ರಾಮಣ್ಣ ರೈ ಕುಪ್ಪಿಲ, ಭಾಸ್ಕರ ರೈ ಸಂಪಿಗೆದಡಿ, ಲೋಲಾಕ್ಷಿ ಆಚಾರ್ಯ, ಕೊಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ ಶೆಟ್ಟಿ ಅಂಬ್ಲಮೊಗರು, ಕಾರ್ಯದರ್ಶಿ ವೇಣುಗೋಪಾಲ್ ಪಾವೂರು ಉಪಸ್ಥಿತರಿದ್ದರು. ವಾಮನ್‍ರಾಜ್ ಪಾವೂರು ಕಾರ್ಯಕ್ರಮ ನಿರೂಪಿಸಿದರು.

Exit mobile version