Site icon Ullalavani

ಹಳೆಕೋಟೆ : 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ

UN NETWORKS

ಉಳ್ಳಾಲ : ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ವಿದ್ಯಾ ಸಂಸ್ಥೆಗಳಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ನಡೆಯಿತು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ ಒಂದನೇ ತರಗತಿಗೆ ದಾಖಾಲಾತಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಯ್ಯಿದ್ ಮದನಿ ಚಾರೀಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು. ಕೆ. ಇಬ್ರಾಹಿಂ, ಉಳ್ಳಾಲ ನಗರ ಸಭೆಯ ಸಹಾಯಕ ಅಭಿಯಂತರ ಉಮೇಶ್ ಕಾಮತ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಗೌರವಿಸಿದರು, ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಸಮನ್ವಯಾ„ಕಾರಿ ಡಾ| ಪ್ರಶಾಂತ್ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿದರು .ವೇದಿಕೆಯಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ಅಬ್ದುಲ್ ಲತೀಫ್ ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯು.ಎನ್ ಇಬ್ರಾಹಿಂ ,ಕೋಶಾಧಿಕಾರಿ ಅಬ್ದುಲ್ ಕರೀಂ ಸದಸ್ಯ ಅಲ್ತಾಫ್ ಯು.ಹೆಚ್. ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ .ಶಿಕ್ಷಕಿ ಸಪ್ನಾರವರು ವಂದಿಸಿದರು .ಶಿಕ್ಷಕಿ ಜಯಲಕ್ಷ್ಮಿ ಹಾಗೂ ದಿವ್ಯರವರು ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿ ಮುಹಮ್ಮದ್ ಮಿಗ್ದಾದ್ ಕಿರಾಅತ್ ಪಠಿಸಿದರು.

Exit mobile version