Site icon Ullalavani

ತೊಕ್ಕೊಟ್ಟುವಿನಿಂದ ದೇರಳಕಟ್ಟೆ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಸಚಿವ ಖಾದರ್

UN NETWORKS

ತೊಕ್ಕೊಟ್ಟು : ಉಳ್ಳಾಲವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 60 ಕೋಟಿ ರೂ ಮತ್ತು ಸಮಗ್ರ ಕುಡಿಯುವ ನೀರಿನ ವ್ಯವಸ್ಥೆಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವಹಾಗೂ ಜಿಲ್ಲಾ ಉಸ್ತುವಾರಿ ಸಚಿವಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಉಳ್ಳಾಲದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು ಉಳ್ಳಾಲ ಸಂಪರ್ಕಿಸುವ ತೊಕ್ಕೊಟ್ಟಿನಿಂದ ದೇರಳಕಟ್ಟೆವರೆಗೆ ಚತುಷತ ರಸ್ತೆ 17 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೋಟೆಕಾರ್ ಸೋಮೆಶ್ವರ ಮಾರ್ಗವಾಗಿ ಉಳ್ಳಾಲದ ಮುಕ್ಕಚ್ಚೇರಿಯಂದ ಅಬ್ಬಕ್ಕ ಸರ್ಕಲ್‍ವರೆಗೆ ರಸ್ತೆ ಅಗಲೀಕರಣ ಮತ್ತು ಅಭವೃದ್ಧಿಗೆ 6 ಕೋಟಿ, ಅಬ್ಬಕ್ಕ ಸರ್ಕಲ್‍ನಿಂದ ಕೋಟೆಪುರ 5 ಕೋಟಿ, ಅಬ್ಬಕ್ಕ ಸರ್ಕಲ್‍ನಿಂದ ಮಾಸ್ತಿಕಟ್ಟೆ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರಸ್ತೆ ಸೌಂದರ್ಯಕರಣಕ್ಕೆ ಹೆಚ್ಚುವರಿ 12 ಕೋಟಿ, ಉಳ್ಳಾಲ ಮುಖ್ಯ ರಾಜಕಾಲುವೆ 5ಕೋಟಿ,ಗ್ರಾಮ ಮಟ್ಟದ ವಿವಿಧ ರಸ್ತೆಗಳಿಗೆ 10 ಕೋಟಿ ವಿಶೇಷ ಅನುದಾನ, ಉಳ್ಳಾಲ ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗೆ 5 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಉಳ್ಳಾಲ ಮಾದರಿನಗರವಾಗಿ ಪರಿವರ್ತನೆಯಾಗಲಿದೆ ಎಂದರು.

ಕುಡಿಯುವ ನೀರಿಗೆ 200 ಕೋಟಿ ರೂ. : ತುಂಬೆಯಿಂದ ಉಳ್ಳಾಲ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆಗೆ 200 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಕಂಬಳಪದವಿನ ಕೆಐಡಿಬಿ ಪ್ರದೇಶದಲ್ಲಿ ನೀರಿನ ಸಂಗ್ರಹಣಾ ವ್ಯವಸ್ಥೆ ನಡೆಸಿ ಬಳಿಕ ವಿವಿಧ ಪ್ರದೇಶಗಳಿಗೆ ನೀರು ಪೂರೈಕೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ನಗರ, ಉಳ್ಳಾಲ ನಗರಸಭಾ ಕೌನ್ಸಿಲರ್‍ಗಳಾದ ಬಾಝಿಲ್ ಡಿ.ಸೋಜ, ರವಿಚಂದ್ರ ಗಟ್ಟಿ, ಮಹಮ್ಮದ್ ಮುಕ್ಕಚ್ಚೇರಿ , ಅಝೀಝ್ ಕೋಡಿ, ಕೃಷ್ಣ ಗಟ್ಟಿಸೋಮೇಶ್ವರ ನಗರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version