UN NETWORKS
ಉಳ್ಳಾಲ : ಬದ್ರಿಯ ಜುಮಾ ಮಸೀದಿ ದೇರಳಕಟ್ಟೆ ಇದರಅಧೀನ ಸಂಸ್ಥೆ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಶನ್ ಇದರ 35ನೇ ವಾರ್ಷಿಕ ಪ್ರಯುಕ್ತ ರಂಝಾನ್ ಪ್ರಭಾಷ ಹಾಗೂ ಬೃಹತ್ ಇಫ್ತಾರ್ ಕೂಟ ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಅಬುದಾಭಿ ರಂಝಾನ್ ಮಾಸದ ಸಂದೇಶ ನೀಡಿದರು. ಈ ಸಂದರ್ಭ ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಕ್ ಹುದವಿರವರನ್ನು ಅನ್ಸಾರುಲ್ ಮುಸ್ಲಿಮೀನ್ ಎಸೋಸಿಶನ್ ವತಿಯಿಂದ ಸನ್ಮಾನಿಸಲಾಯಿತು. ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ನ ಅಧ್ಯಕ್ಷ ಇಲ್ಯಾಸ್ ಹಾಜಿ ಡಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಾವಿರಕ್ಕೂ ಅಧಿಕ ಮಂದಿ ಸಮೂಹಿಕ ಇಫ್ತಾರ್ ಕೂಟ ಸಂಗಮದಲ್ಲಿ ಭಾಗವಹಿಸಿದರು.
ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ. ಡಿ, ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ ಮುಹಮ್ಮದ್, ಹಯಾತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಾಸರ್, ಬದ್ರಿಯ ಜುಮಾ ಮಸೀದಿ ಖತೀಬ್ ಶರೀಫ್ ಅರ್ಶದಿ, ಸದರ್ ಮುಅಲ್ಲಿಂ ಅಬ್ದುಲ್ಲಾ ಫೈಝಿ, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ತಬೂಕ್ ದಾರಿಮಿ, ದೇರಳಕಟ್ಟೆ ಶಾಖೆ ಅಧ್ಯಕ್ಷ ಮುಹಮ್ಮದ್ ಇರ್ಫಾನ್, ಮದರಸ ಮ್ಯಾನೇಜ್ಮೆಂಟ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ಉಪಾಧ್ಯಕ್ಷ ಸಿದ್ದೀಕ್ ಡಿ.ಎಂ, ಕೋಶಾಧಿಕಾರಿ ಮುಹಮ್ಮದ್ ಯಾಸೀನ್, ಪ್ರ.ಕಾರ್ಯದರ್ಶಿ ಅಮೀರ್ ಹುಸೈನ್, ಜೊತೆ ಕಾರ್ಯದರ್ಶಿ ಅಬ್ದುಲ್ ಖಾದರ್ ಐ, ಹನೀಫ್.ಜೆ , ಬದ್ರಿಯ ಜುಮಾಮಸೀದಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎನ್, ಕಾರ್ಯದರ್ಶಿ ಅಬ್ದಲ್ ಆರ್.ಅಹ್ಮದ್ ಶೇಟ್, ಕಾರ್ಯದರ್ಶಿಗಳಾದ ಅಬ್ದುಲ್ ರಶೀದ್ ಡಿ.ಎಂ, ಮುತ್ತಲೀಬ್, ಹಯಾತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿಹಾಬುದ್ದೀನ್,ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಕಾರ್ಯದರ್ಶಿ ಮುಹಮ್ಮದ್ ಮುನ್ಸೀದ್ ಉಪಸ್ಥಿತರಿದ್ದರು.