UN NETWORKS
ಕೊಣಾಜೆ : ಕೊಣಾಜೆ ಗ್ರಾಮದ ಕುಂಟಾಲಗುಳಿಯ ಶ್ರೀ ಮಹಾಕಾಳಿ ವನಸಾನಿಧ್ಯದಲ್ಲಿ ಪ್ರತಿಷ್ಠಾ ದಿನದ ಅಂಗವಾಗಿ ಶ್ರೀ ಮಹಾಕಾಳಿ ಸೇವಾ ಮಂಡಳಿಯ ವತಿಯಿಂದ ಸಾಮೂಹಿಕ ದುರ್ಗಾಪೂಜೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ದುರ್ಗಾ ಪೂಜೆಯ ಬಳಿಕ ಕೊಣಾಜೆ ಕುಂಟಲಗುಳಿಯ ಸಿ.ಎಚ್.ಕೃಷ್ಣ ಭಟ್ ಹಾಗೂ ಉದಯಕುಮಾರ್ ಅವರನ್ನು ಶ್ರೀ ಮಹಾಕಾಳಿ ಸೇವಾ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಹಾಕಾಳಿ ವನಸಾನಿಧ್ಯಕ್ಕೆ ಕೊಡುಗೆ ನೀಡಿದ ಈಶ್ವರ ಭಟ್ ಸುಣ್ಣಂಬಳ ಹಾಗೂ ಹೇಮಾವತಿ ನಡುಪದವು ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಭಟ್ ಕೊಣಾಜೆ ಬೀಡು ಹಾಗೂ ಸತೀಶ್ ಕೊಣಾಜೆ ಸನ್ಮಾನ ಪತ್ರ ವಾಚಿಸಿದರು. ಶಿವಪ್ರಕಾಶ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಕಾಳಿ ಸೇವಾಮಂಡಳಿಯ ಮಹಾಕಾಳಿ ಸೇವಾ ಮಂಡಳಿ, ಮಹಾಕಾಳಿ ಮಿತ್ರಮಂಡಳಿ ಹಾಗೂ ಮಾತೃಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.