UN NETWORKS
ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ 35 ,000 ಅಂತರದಲ್ಲಿದ್ದ ಮತಗಳನ್ನು 11,000 ಅಂತರಕ್ಕೆ ತಂದು ನಿಲ್ಲಿಸಿರುವುದರ ಹಿಂದೆ ಕ್ಷೇತ್ರದ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಇಂತಹ ಕಾರ್ಯಕರ್ತರಿಂದ ಹಾಗೂ ಪ್ರಧಾನಿ ಮೋದಿಯವರ ಜಗತ್ತು ಮೆಚ್ಚುವ ಕಾರ್ಯಗಳಿಂದಾಗಿ ಮತ್ತೊಮ್ಮೆ ಜಗತ್ತಿನಾದ್ಯಂತ ಪ್ರಧಾನಿ ಮೋದಿ ಶಕ್ತಿಯನ್ನು ಪ್ರದರ್ಶಿಸುವ ಅವಕಾಶ ದೊರೆತಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.
ಅವರು ಪಂಡಿತ್ ಹೌಸ್ ನಲ್ಲಿ ಬಿಜೆಪಿ ಕಾರ್ಯಕರ್ತರ ನಡೆಸಿದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಜಗತ್ತು ನೋಡುತ್ತಿದೆ ದೇಶದ ಸಂಭ್ರಮ. ಮೋದಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತೊಂದು ಅವಕಾಶ ಸಿಕ್ಕಿದೆ. ಪೂರ್ಣ ಬಹುಮತ ಸೇರಿದಂತೆ 302 ಸೀಟುಗಳನ್ನು ಪಡೆದ ಬಿಜೆಪಿ, ಎನ್‍ಡಿಎ ಜೊತೆಗೆ 350 ಸೀಟುಗಳು ಪಡೆಯುವುದರ ಮೂಲಕ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಚಿಂತನೆಯಂತೆ ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸಿ, ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲಾಗಿರುವುದು ದೊಡ್ಡ ಯಶಸ್ಸು ಎಂದರು. ಈ ಸಂದರ್ಭ ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ವಿಜಯ ಗೇಮ್ಸ್ ಟೀಂ ಸದಸ್ಯರು ಪಾಲ್ಗೊಂಡಿದ್ದರು. ಪಟಾಕಿ ಸಿಡಿಸುವ ಮೂಲಕ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ'
ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಎಬಿಸಿ ಫ್ರೆಂಡ್ಸ್ ಸರ್ಕಲ್ ಹಾಗೂ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ ಸಾಮೂಹಿಕ ಡಿಜೆ ಡ್ಯಾನ್ಸ್ ನಲ್ಲಿನಿಖಿಲ್ ಎಲ್ಲಿದ್ದೀಯಪ್ಪಾ ‘ ದನಿ ಮತ್ತೆ ಮೇಳೈಸಿತು. ಒಂದು ಗಂಟೆ ಕಾಲ ನಡೆದ ಡಿಜೆ ಡ್ಯಾನ್ಸ್ ಗಾಗಿ ಹಾಕಿದ ಹಾಡಿನುದ್ದಕ್ಕೂ ನಿಖಿಲ್ ಎಲ್ಲಿದ್ದೀಯಪ್ಪಾ ದನಿಗೆ ಕಾರ್ಯಕರ್ತರು ದನಿಗೂಡಿಸಿ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.
ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ನಗರಸಭೆ ಸದಸ್ಯರುಗಳಾದ ಗೀತಾ ಬಾೈ, ನಮಿತಾ ಗಟ್ಟಿ, ನಗರಸಭೆ ಮಾಜಿ ಸದಸ್ಯ ಭಗವಾನ್, ಬಿಜೆಪಿ ಸಾಮಾಜಿಕ ಜಾಲತಾಣದ ಅಜಿತ್ , ಮಯೂರ್ ಉಳ್ಳಾಲ್, ಎಬಿಸಿ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.