Site icon Ullalavani

ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್ ಬೆಂಗಳೂರು ಇದರ ಆಶ್ರಯದಲ್ಲಿ ಬೃಹತ್ ಇಫ್ತಾರ್ ಕೂಟ

UN NETWORKS

ಬೆಂಗಳೂರು : ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್ ಬೆಂಗಳೂರು ಇದರ ಆಶ್ರಯದಲ್ಲಿ ಬೃಹತ್ ಇಫ್ತಾರ್ ಕೂಟವು ಮೇ 22 ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕಬ್ಬನ್ ಪೇಟೆಯ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಎಮ್ ಉಮ್ಮರ್ ಹಾಜಿ ವಹಿಸಲಿದ್ದಾರೆ. ಹಾಶಿಮ್ ಜಿಫ್ರಿ ತಂಗಳ್ ದುಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಲ್ಲೇಗ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದಿಕ್ ಜಲಾಲಿ ಮತ್ತು ಶಾಫಿ ಸಹದಿ ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಕ್ಫ್ ಸಚಿವರಾದ ಜನಾಬ್ ಜಮೀರ್ ಅಹ್ಮದ್ ಖಾನ್, ರಾಜ್ಯ ನಗರಾಭಿವೃದ್ಧಿ ಜನಾಬ್ ಯು ಟಿ ಖಾದರ್, ವಿಧಾನಸಭಾ ಸದಸ್ಯ ಬಿ ಎಮ್ ಫಾರೂಕ್, ಮಾಜಿ ಪೊಲೀಸ್ ಆಯುಕ್ತರಾದ ಜಿ.ಎ ಬಾವ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಝಫ್ರುಲಾಹ್ ಖಾನ್, ಬಿಬಿಎಮ್ ಪಿ ಕಾರ್ಪೊರೇಟರ್ಗಳಾದ ಮುಜಾಹಿದ್ ಪಾಷ, ಇಮ್ರಾನ್ ಪಾಷ, ಪುತ್ತೂರು ಕಾರ್ಪೊರೇಟರ್ ಮಹಮದ್ ರಿಯಾಜ್ ಕೆ, ಕುದ್ರೋಳಿ ವರ್ಲ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಹಫೀಜ್ ಕುದ್ರೋಳಿ, ಜಯನಗರ ಈದ್ಗ ಮಸೀದಿಯ ಪ್ರದಾನ ಕಾರ್ಯದರ್ಶಿಯಾದ ಒಬೇದುಲ್ಲಾಹ್ ಖಾನ್, ಆರ್ ಟಿ ನಗರ ಸಂಚಾರ ಪೊಲೀಸ್ ಆಯುಕ್ತರಾದ ಬಶೀರ್ ಅಹ್ಮದ್, ಹೋಟೆಲ್ ಎಂಪೈರ್ ಪಿಆರ್ ಓ ಅಶ್ರಫ್ ಯು ಕೆ, ಸಿ ಎ ನೌಫಾಲ್ ಮುಹಮ್ಮದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Exit mobile version