UN NETWORKS
ಉಳ್ಳಾಲ : ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದು ಅನುಭವಿಸುವಾಗ ಇಸ್ಲಾಂ ಧರ್ಮದ ನೆನಪಾಗದೆ ,ಮುಸ್ಲಿಮರಿಗೆ ಅನ್ಯಾಯವಾಗುವಾಗ ಜಾಣಮೌನ ವಹಿಸಿದ ರೋಷನ್ ಬೇಗ್ ತನಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಕಾರಣಕ್ಕಾಗಿ ಕಾಂಗ್ರೆಸ್ ಮುಸ್ಲಿಮರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಮುದಾಯವನ್ನು ಎಳೆದು ತಂದದ್ದು ನಾಚಿಕಗೇಡು ಎಂದು ಮಾನವ ಹಕ್ಕುಗಳ ಹೋರಾಟಗಾರ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷದಿಂದ ಎಲ್ಲವೂ ಸಿಗುವಾಗ ಒಬ್ಬನೇ ಅನುಭವಿಸಿ ಧರ್ಮ ನೆನಪು ಬಾರದ ಬೇಗ್ ಗೆ ಈಗ ತಾನು ಮುಸ್ಲಿಂ ಎಂದು ನೆನಪಾದದ್ದು ವಿಷಾದನೀಯ ಎಂದು ಹೇಳಿದ್ದಾರೆ. ಇದೀಗ ಜಾರಕಿಹೊಳಿಯೊಂದಿಗೆ ಬಿಜೆಪಿ ಗೆ ಹಾರಿದರೆ ವಕ್ಫ್ ಖಾತೆಯನ್ನು ಪಡೆಯಬಹುದೆಂಬ ಆಸೆಯಿಂದ “ಅಗತ್ಯಬಂದರೆ ಮುಸ್ಲಿಮರು ಬಿಜೆಪಿ ಯ ಕೈ ಹಿಡಿಯಬೇಕೆಂದು ಬೇಗ್ ಹೇಳಿದ್ದಾರೆ. ದೃಶ್ಯ ಮಾಧ್ಯಮದ ನಿರೂಪಕನೊಬ್ಬ ಪ್ರವಾದಿಯವರನ್ನು ನಿಂದನೆ ಮಾಡಿದಾಗ ಇಡೀ ಸಮುದಾಯ ವೇ ಅದರ ವಿರುದ್ಧ ಧ್ವನಿ ಎತ್ತಿತ್ತು.ಆಗ ಅದರ ಬಗ್ಗೆ ಒಂದೇ ಒಂದು ಮಾತನಾಡದ ರೋಷನ್ ಬೇಗ್ ಗೆ ಈಗ ತನ್ನ ಸಮುದಾಯದ ನೆನಪಾದುದು ವಿಪರ್ಯಾಸವೆಂದು ಶಾಫಿ ಹೇಳಿದರು.
ಬೇಗ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಿ.ಎಂ.ಇಬ್ರಾಹಿಂ ಕೂಡಾ ಕಾಂಗ್ರೆಸ್ ನಿಂದ ಎಲ್ಲವನ್ನೂ ಪಡೆದು ತೇಗಿದವರು ಈಗ ತಮ್ಮ ಉದ್ದೇಶ ಈಡೇರದಾದಾಗ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಮುಸ್ಲಿಮರು ಅರ್ಥ ಮಾಡುತ್ತಾರೆ ಎಂದ ಬಬ್ಬುಕಟ್ವೆಯವರು ವೈಯಕ್ತಿಕ ಲಾಭಕ್ಕಾಗಿ ಧರ್ಮವನ್ನು ಎಳೆದು ತರಬೇಡಿ ಎಂದು ಕಿವಿಮಾತು ಹೇಳಿದರು.