UN NETWORKS
ಇರಾ : ಇರಾ ಗ್ರಾಮದ ಕೆಂಜಿಲ ಎಂಬಲ್ಲಿ ಶ್ರೀಮತಿ ರಾಧಮ್ಮ ಎಂಬವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮನೆಗೆ ಹಾನಿಯಾಗಿ ಮನೆಯ ವೈರಿಂಗ್ ಸಂಪೂರ್ಣ ಉರಿದುಹೋಗಿ ಅದೃಷ್ಟವಶಾತ್ ಮನೆಯ ಸದಸ್ಯರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ತುಳಸಿ ಪೂಜಾರಿ, ಶೇಖರ ಪೂಜಾರಿ, ಸುಧಾಕರ ಕೆ.ಟಿ., ಗ್ರಾಮ ಕರಣೀಕರಾದ ತೌಫೀಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.