Site icon Ullalavani

ಉಳ್ಳಾಲ : ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

UN NETWORKS

ಉಳ್ಳಾಲ : ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಉಳ್ಳಾಲದ ನೇತ್ರಾವತಿ ನದಿ ತಟದಲ್ಲಿ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.ಮಾಡೂರು ನಿವಾಸಿ ಲೋಕೇಶ್ (63) ಎಂಬವರು ಮೇ.13 ರಿಂದ ನಾಪತ್ತೆಯಾಗಿದ್ದರು.ಬಳಿಕ ಮನೆಮಂದಿ ಹುಡುಕಾಟ ನಡೆಸಿದ್ದರೂ ಲೋಕೇಶ್ ಪತ್ತೆಯಾಗಿರಲಿಲ್ಲ.

ಮಂಗಳವಾರ ಸಂಜೆ ನೇತ್ರಾವತಿ ಸೇತುವೆಯಲ್ಲಿ ಕುಡಿದ ಜ್ಯೂಸಿನ ಬಾಟಲಿ ಹಾಗೂ ಚಪ್ಪಲಿಗಳು ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡ ಮನೆಮಂದಿ ಉಳ್ಳಾಲ, ಅಳಿವೆಬಾಗಿಲು ಸಹಿತ ಸಮುದ್ರ ತೀರದಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಮಧ್ಯಾಹ್ನ ನೇತ್ರಾವತಿ ಸೇತುವೆಯ ಕೆಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಲೋಕೇಶ್ ಅವರು ಹಿಂದೆ ಖಾಸಗಿ ಬಸ್ಸು ಚಾಲಕರಾಗಿ ದುಡಿಯುತ್ತಿದ್ದರು‌ . ಕೆಲ ವರ್ಷಗಳಿಂ ಅನಾರೋಗ್ಯ ದಿಂದ ಬಳಲುತ್ತಿದ್ದ ಇವರು ಕಿಡ್ನಿ ಸಮಸ್ಯೆಗೂ ಒಳಗಾಗಿದ್ದರು.

ಡಯಾಲಿಸಿಸ್ ಮಾಡುತ್ತಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು. ಇದರಿಂದ ನೊಂದು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪುತ್ರ ಸಂತೋಷ್ ಎರಡು ದಿನಗಳಲ್ಲಿ ವಿದೇಶಕ್ಕೆ ತೆರಳುವವರಿದ್ದರು.

ಜಾಹೀರಾತು
Exit mobile version